ಮನೆಯವರ ವಿರೋಧದ ನಡುವೆ ಮದುವೆಯಾಗಿ ಪೊಲೀಸ್ ಭದ್ರತೆಯಲ್ಲಿದ್ದ ಜೋಡಿ – ಕಿಟಕಿ ಮೂಲಕ ವರ ಎಸ್ಕೇಪ್
ರೋಹ್ಟಕ್: ರೋಹ್ಟಕ್‌ನಲ್ಲಿ ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿ ಪೊಲೀಸ್ ಭದ್ರತೆಯಿಲ್ಲಿದ್ದ ಯುವಕನೋರ್ವ ಬಂಧನಕ್ಕೆ ಹೆದರಿ ವಧುವನ್ನು ಬಿಟ್ಟು ಕಿಟಕಿ ಮೂಲಕ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಪ್ರದೀಪ್ ಕುಮಾರ್ (28) ಎಂಬಾತ ಜಜ್ಜರ್‌ನ ಖುಂಗೈ ಗ್ರಾಮದ ಸವಿತಾ ಎಂಬಾಕೆಯನ್ನು ಮನೆಯವರ ವಿರೋಧದ ನಡುವೆ ಅಕ್ಟೋಬರ್ 14 ರಂದು ವಿವಾಹವಾಗಿದ್ದು, ವಿವಾಹದ ಬಳಿಕ ಮನೆಯೊಂದರಲ್ಲಿ ಪೊಲೀಸ್ ಭದ್ರತೆಯಲ್ಲಿ ದಂಪತಿ ತಂಗಿದ್ದರು. ಅಲ್ಲದೆ ಈ ಭದ್ರತೆ ನವೆಂಬರ್ 2ರವರೆಗೆ ನೀಡಲಾಗಿತ್ತು. ಆದರೆ ಇದೇ ವೇಳೆ ಯುವಕ ಪ್ರದೀಪ್ ವಿರುದ್ದ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇದರಿಂದ ಆತನಿಗೆ ಬಂಧನದ ಭಯ ಉಂಟಾಗಿ ಮನೆಯಲ್ಲಿಯೇ ವಧುವನ್ನು ಬಿಟ್ಟು ಮನೆಯ ಕಿಟಕಿ ಮೂಲಕ ಪರಾರಿಯಾಗಿದ್ದಾನೆ.

ಇನ್ನು ಪತಿ ಕಾಣೆಯಾಗಿರುವ ಬಗ್ಗೆ ಪತ್ನಿ ಸವಿತಾ ದೂರು ದಾಖಲಿಸಿದ್ದು, ಆತನ ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.





