December 15, 2025

ಬಂಟ್ಟಾಳ: ಎಸ್ ಡಿಪಿಐ ವತಿಯಿಂದ ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿ ಹಾಕಿದ್ದ ಬ್ಯಾನರ್ ಹರಿದ ದುಷ್ಕರ್ಮಿಗಳು

0
IMG-20221030-WA0010.jpg

ಬಂಟ್ವಾಳ : ಬಿಸಿರೋಡಿನ ಕೈಕಂಬದಲ್ಲಿ ಎಸ್ ಡಿ ಪಿ ಐ ವತಿಯಿಂದ ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯಗಳನ್ನು ಕೋರಿ ಹಾಕಿದ್ದ ಬ್ಯಾನರನ್ನು ದುಷ್ಕರ್ಮಿಗಳು ಹರಿದಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆ ರಾತ್ರಿ ಹಾಕಲಾಗಿದ್ದ ಈ ಫ್ಲೆಕ್ಸ್ ನಲ್ಲಿ, ಎಸ್ ಡಿ ಪಿ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರಿಂದ ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯ ಎಂದು ಉಲ್ಲೇಖವಾಗಿತ್ತು.

ಕನ್ನಡ ರಾಜ್ಯೋತ್ಸವದ ಫ್ಲೆಕ್ಸ್ ಹಾಕುವುದು ಕೂಡ ಇಲ್ಲಿನ ಕೆಲವರಿಗೆ ಸಹಿಸಲಾಗುತ್ತಿಲ್ಲ. ಇಂತಹ ಕನ್ನಡ ವಿರೋಧಿಗಳನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸಬೇಕೆಂದು ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಆಗ್ರಹಿಸುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!