March 22, 2026

ಸುಳ್ಯ: ಹತ್ತುದಿನದ ಹಸುಗೂಸು ಮಗುವನ್ನು ಬಾವಿಗೆಸೆದು ಕೊಂದ ತಾಯಿ

0
Infants-Arms-and-Legs-–-Whats-Normal-and-Whats-Not.jpg

ಸುಳ್ಯ: ಹತ್ತುದಿನದ ಹಸುಗೂಸನ್ನು ತಾಯಿಯೊಬ್ಬಳು ಬಾವಿಗೆಸೆದು ಕೊಂದ ಕ್ರೂರ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದಿಂದ ವರದಿಯಾಗಿದೆ.

ಗ್ರಾಮದ ಬಸ್ತಿ ಕಾಡು ಎಂಬಲ್ಲಿ ಇಂದು(ಅ.29) ಸಂಜೆ ತಾಯಿ ಹತ್ತು ದಿನದ ಮಗುವನ್ನು ಬಾವಿಗೆ ಎಸೆದಿದ್ದು ಮಗು ಮೃತಪಟ್ಟ ಘಟನೆ ವರದಿಯಾಗಿದೆ. ಮಗುವನ್ನು ಬಾವಿಗೆ ಎಸೆದ ತಾಯಿ ಪವಿತ್ರ ಎಂದು ಗುರುತಿಸಲಾಗಿದೆ.

ಈಕೆ ಕೆಲವು ಸಮಯಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಇತ್ತೀಚೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಘಟನೆ ನಡೆದಿದ್ದು, ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!