ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ – ಇಲ್ಲಿದೆ ವಿವರ
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು 2023ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಇಂದು ಪ್ರಕಟಿಸಿದ್ದು, ಏ.1ರಿಂದ 15ರವರೆಗೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ.
ಈ ವೇಳಾಪಟ್ಟಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು/ಪೋಷಕರು ಆಕ್ಷೇಪಣೆ ಸಲ್ಲಿಸಲು ನ.28ರ ವರೆಗೆ ಅವಕಾಶ ನೀಡಿದ್ದು, ಆಕ್ಷೇಪಣೆಗಳನ್ನು ಇ- ಮೇಲ್ dpikseeb@gmail.com ಅಥವಾ sadpi.csec.kseeb@gmail.com ಅಥವಾ ನಿರ್ದೇಶಕರು, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, 6ನೇ ಅಡ್ಡ ರಸ್ತೆ, ಮಲ್ಲೇಶ್ವರ, ಬೆಂಗಳೂರು- 560 003 ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸಬಹುದು.
ವೇಳಾಪಟ್ಟಿ; ಏಪ್ರಿಲ್.1-ಪ್ರಥಮ ಭಾಷೆ ಕನ್ನಡ, ಏ.4- ಗಣಿತ, ಸಮಾಜಶಾಸ್ತ್ರ, ಏ.6-ದ್ವಿತೀಯ ಭಾಷೆ ಇಂಗ್ಲಿಷ್, ಏ.8- ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್-4, ಮೆಕಾನಿಕಲ್ ಆಯಂಡ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್-2, ಮೆಕಾನಿಕಲ್ ಎಂಜಿನಿಯರಿಂಗ್-4, ಎಂಜಿನಿಯರಿಂಗ್ ಗ್ರಾಫಿಕ್ಸ್-2, ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ, ಏ.10- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ, ಏ.12- ತೃತೀಯ ಭಾಷೆ ಹಿಂದಿ, ಎನ್‌ಎಸ್‌ಕ್ಯುಎಫ್ ವಿಷಯಗಳು, ಏ.15- ಸಮಾಜ ವಿಜ್ಞಾನ.