December 15, 2025

ಕಾಸರಗೋಡು: ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಸ್ಕೂಟರ್, ಓರ್ವ ಮೃತ್ಯು, ಇಬ್ಬರು ಗಾಯ

0
image_editor_output_image-1824883854-1667020795017.jpg

ಕಾಸರಗೋಡು: ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಕುಂಬಳೆ ಸಮೀಪದ ಪೇರಾಲ್ – ಕಣ್ಣೂರು ರಸ್ತೆಯಲ್ಲಿ ನಡೆದಿದೆ.

ಪೆರುವಾಡ್ ಕಡಪ್ಪುರದ ಅನಾಸ್ (27) ಮೃತಪಟ್ಟವರು. ಜೊತೆಗಿದ್ದ ಮೊಗ್ರಾಲ್ ರಹಮತ್ ನಗರದ ಮುಹಮ್ಮದ್ ಪುಳಿಕ್ಕೂರಿನ ಮುಹಮ್ಮದ್ ( 20) ಮತ್ತು ಸುಹೈಲ್ ( 28) ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಪೈಕಿ ಸುಹೈಲ್ ಸ್ಥಿತಿ ಗಂಭೀರವಾಗಿದೆ. ಗಂಭೀರ ಗಾಯಗೊಂಡಿದ್ದ ಅನಾಸ್‌ನನ್ನು ಕುಂಬಳೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.

ರಸ್ತೆ ಬದಿಯ ಕಲ್ಲಿಗೆ ಬಡಿದು ಸ್ಕೂಟರ್ ಮಗುಚಿ ಬಿದ್ದು ಈ ದುರ್ಘಟನೆ ನಡೆದಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!