ಮಣಿಪಾಲ: ಕಾರಿನ ಮೇಲೆ ಪಟಾಕಿ ಸಿಡಿಸುತ್ತಾ ಅಡ್ಡಾದಿಡ್ಡಿ ಸಂಚಾರ – ಆರೋಪಿ ವಶಕ್ಕೆ
ಕಾರಿನ ಟಾಪ್ ಮೇಲೆ ಪಟಾಕಿ ಇಟ್ಟು ಸಿಡಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ಯುವಕನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯನ್ನು ಮಣಿಪಾಲದ ಸೆಲೂನ್‌ನಲ್ಲಿ ಕರ್ತವ್ಯ ಮಾಡಿಕೊಂಡಿರುವ ವಿಶಾಲ್ ಕೊಹ್ಲಿ(26) ಎಂದು ಗುರುತಿಸಲಾಗಿದೆ.
ವೇಳೆಗೆ ಮಣಿಪಾಲದ ಡಾ ವಿ.ಎಸ್.ಆಚಾರ್ಯ ರಸ್ತೆಯಲ್ಲಿ ಅ.25ರಂದು ರಾತ್ರಿ ಕಾರಿನಲ್ಲಿ ಅದರ ಚಾಲಕ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕಾರಿನ ಮೇಲ್ಗಡೆ ಪಟಾಕಿ ಇಟ್ಟು ಸಿಡಿಸಿದ್ದು, ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇನ್ನು ಕಾರನ್ನು ಮಣಿಪಾಲದ ಸಿಂಡಿಕೇಟ್ ವೃತ್ತದ ಬಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.






