February 1, 2026

ಸುಳ್ಯ: ನಗರದ ಪುಟ್ಪಾತ್ ದುಸ್ಥಿತಿಗೆ ಪತ್ರಿಕಾ ವರದಿಗಾರನ ಕಾಲು ಜಖಂ

0
IMG-20211110-WA0048

ಸುಳ್ಯ: ನಗರದ ಮುಖ್ಯರಸ್ತೆಯ ಎರಡು ಭಾಗಗಳಲ್ಲಿ ಅಳವಡಿಸಲಾಗಿರುವ ಚರಂಡಿಯ ಸ್ಲ್ಯಾಬ್ ಗಳ ಅವೈಜ್ಞಾನಿಕತೆಯ ಕಾಮಗಾರಿಯಿಂದ ಹಲವಾರು ಮಂದಿ ಪಾದಚಾರಿಗಳು ಬಿದ್ದು ಗಾಯಗೊಂಡಿದ್ದಾರೆ.

ಅವರ ಸಾಲಿಗೆ ಸುಳ್ಯದ ಪತ್ರಕರ್ತರೊಬ್ಬರು ಸೇರಿಕೊಂಡರು.ಇಂದು ವರದಿಗಾರರೊಬ್ಬರು ಸ್ಲಾಬ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಸ್ಲ್ಯಾಬ್ ಕುಸಿದು ಬಿದ್ದು ಅವರ ಕಾಲಿಗೆ ಬಲವಾದ ಗಾಯ ಉಂಟಾಗಿದೆ. ಘಟನೆಯನ್ನು ನೋಡಿದ ಸ್ಥಳೀಯರು ವರದಿಗಾರರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ದಿದ್ದಾರೆ. ಘಟನೆಯಿಂದ ಅವರ ಮೊಣಕಾಲಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ಸುಳ್ಯದ ರಸ್ತೆಯುದ್ದಕ್ಕೂ ಫುಟ್ಪಾತ್ ಗಳು ಅವೈಜ್ಞಾನಿಕವಾಗಿದೆ. ಅಲ್ಲಲ್ಲಿ ಸ್ಲ್ಯಾಬ್ ಗಳು ಕುಸಿದು ನಿಂತಿವೆ. ಇದರ ಮೇಲೆ ಸಾರ್ವಜನಿಕರು ನಡೆದಾಡು ಕೊಳ್ಳುವಾಗ ಸ್ಲ್ಯಾಬ್ ಗಳನ್ನು ಮೆಟ್ಟಿದರೆ ಕಾಲು ಮುರಿದುಕೊಳ್ಳುವುದು ಗ್ಯಾರಂಟಿ ಎಂದೆಲ್ಲಾ ಹಲವಾರು ಬಾರಿ ಪತ್ರಿಕೆಗಳಲ್ಲಿ ವರದಿ ಮಾಡಿದರು ಸಂಬಂಧಪಟ್ಟ ಅಧಿಕಾರಿಗಳಿಗೆ ಇದು ಯಾವುದು ನಾಟುವಂತೆ ಕಾಣುತ್ತಿಲ್ಲ . ಸುಮಾರು ಆರು ವರ್ಷದ ಹಿಂದೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕಾಮಗಾರಿಯನ್ನು ಕೆ.ಎರ್.ಡಿ.ಸಿ ಎಲ್ ಕೈಗೊಂಡು ಇನ್ನೂ ಅಪೂರ್ಣವಾಗಿ ಉಳಿದಿದೆ.ಇದನ್ನು ಸರಿಪಡಿಸುವವರು ಯಾರು ಎಂಬುದು ಈಗ ಪ್ರಶ್ನೆಯಾಗಿ ಉಳಿದುಕೊಂಡಿದೆ. ಹಾಗೂ ಇನ್ನೆಷ್ಟು ಜನರ ಬಲಿಗಾಗಿ ಈ ಗುಂಡಿಗಳು ಕಾಯುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

Leave a Reply

Your email address will not be published. Required fields are marked *

error: Content is protected !!