December 16, 2025

ಪಾರ್ಕಿಂಗ್ ಮಾಡುವ ವಿಚಾರವಾಗಿ ಗಲಾಟೆ: ತಾರಕಕ್ಕೇರಿ ಕೊಲೆ

0
Screenshot_2022-10-27-10-45-53-33_680d03679600f7af0b4c700c6b270fe7.jpg

ಗಾಜಿಯಾಬಾದ್: ವಾಹನ ನಿಲುಗಡೆ ಮಾಡುವ ವಿಚಾರವಾಗಿ ಸಂಬಂಧಿಸಿದಂತೆ ಏರ್ಪಟ್ಟ ಗಲಾಟೆ ತಾರಕಕ್ಕೇರಿ ಕೊಲೆ ಹಂತಕ್ಕೆ ಹೋಗಿರುವ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ.

ಗಾಜಿಯಾಬಾದ್ ಉಪಾಹಾರ ಗೃಹದಲ್ಲಿ ಈ ಘಟನೆ ನಡೆದಿದ್ದು, ಉಪಾಹಾರ ಗೃಹ ಹೊರಗೆ ವಾಹನ ನಿಲುಗಡೆ ಮಾಡುವ ವಿಚಾರವಾಗಿ ನಿನ್ನೆ ರಾತ್ರಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಪಕ್ಕದ ವಾಹನದ ಬಾಗಿಲು ತೆರೆಯಲು ಸಾಧ್ಯವಾಗದ ರೀತಿಯಲ್ಲಿ ಕಾರು ನಿಲ್ಲಿಸಲಾಗಿತ್ತು.

ಇದು ಕಾರು ಚಾಲಕ ವರುಣ್ ಮತ್ತು ಇನ್ನೊಂದು ಕಾರಿನಲ್ಲಿದ್ದವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಈ ವಾಗ್ವಾದವು ಸ್ವಲ್ಪದರಲ್ಲೇ ಹೊಡೆದಾಟಕ್ಕೆ ತಿರುಗಿ ವರುಣನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಲಾಗಿದೆ. ಇಟ್ಟಿಗೆಯಿಂದ ಹೊಡೆಯುವ ವಿಡಿಯೋವನ್ನು ರಸ್ತೆ ಭಾಗದಲ್ಲಿ ಕಾರಿನಲ್ಲಿ ಚಲಿಸುತ್ತಿದ್ದ ವ್ಯಕ್ತಿಯೊಬ್ಬ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ವ್ಯಾಪಕ ವೈರಲ್ ಆಗಿದೆ.

ವರುಣ್ ಉಪಾಹಾರ ಗೃಹದ ಹತ್ತಿರ ವಾಸಿಸುತ್ತಿದ್ದರು ಮತ್ತು ಡೈರಿ ವ್ಯಾಪಾರವನ್ನು ನಡೆಸುತ್ತಿದ್ದರು. ಅವರ ತಂದೆ ದೆಹಲಿಯ ನಿವೃತ್ತ ಪೊಲೀಸ್ ಅಧಿಕಾರಿ. ನಿನ್ನೆ ರಾತ್ರಿ ವರುಣ್ ತನ್ನ ಕಾರನ್ನು ಉಪಾಹಾರ ಗೃಹದ ಹೊರಗೆ ನಿಲ್ಲಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪಕ್ಕದ ವಾಹನದ ಬಾಗಿಲು ತೆರೆಯಲು ಸಾಧ್ಯವಾಗದ ರೀತಿಯಲ್ಲಿ ಕಾರು ನಿಲ್ಲಿಸಲಾಗಿತ್ತು. ಇದು ವರುಣ್ ಮತ್ತು ಇನ್ನೊಂದು ಕಾರಿನಲ್ಲಿದ್ದವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಈ ವಾಗ್ವಾದವು ಸ್ವಲ್ಪದರಲ್ಲೇ ಹೊಡೆದಾಟಕ್ಕೆ ತಿರುಗಿ ವರುಣ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಯಿತು

Leave a Reply

Your email address will not be published. Required fields are marked *

error: Content is protected !!