March 22, 2026

ಕಲುಷಿತ ನೀರು ಕುಡಿದು ಓರ್ವ ಸಾವು, 37 ಮಂದಿ ಅಸ್ವಸ್ಥ

0
Screenshot_2022-10-26-10-23-50-88_680d03679600f7af0b4c700c6b270fe7.jpg

ಯಾದಗಿರಿ: ಕಲುಷಿತ ನೀರು ಕುಡಿದು ಓರ್ವ ಸಾವನ್ನಪ್ಪಿ, 37 ಮಂದಿ ಅಸ್ವಸ್ಥಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೊಟ್‌ಪೇಟ್ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಹೊನ್ನಪ್ಪ ಗೌಡ ಎಂದು ಗುರುತಿಸಲಾಗಿದೆ. ಶನಿವಾರದಿಂದ ಇಲ್ಲಿಯವರೆಗೆ ಹೊಟ್‌ಪೇಟೆ ಗ್ರಾಮದಲ್ಲಿ 37 ಪ್ರಕರಣಗಳು ವರದಿಯಾಗಿವೆ. ಆದರೆ ವೈದ್ಯಕೀಯ ವರದಿ ಪ್ರಕಾರ ಹೊನ್ನಪ್ಪ ಗೌಡ ಸಾವಿಗೆ ಕಲುಷಿತ ನೀರು ಸೇವನೆಯ ಜೊತೆಗೆ ಬೇರೆ ಕಾರಣಗಳೂ ಇವೆ ಎಂದು ಹೇಳಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಗ್ರಾಮದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ, ಅವರ ಸಾವು ಕಲುಷಿತ ನೀರಿನಿಂದ ಸಂಭವಿಸಿಲ್ಲ ಎಂದು ಸಂಬಂಧವಿಲ್ಲ ಎಂದು ಶಹಾಪುರ ತಹಶೀಲ್ದಾರ್ ಮಧುರಾಜ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!