March 22, 2026

ನಟಿ ಅರೆನಗ್ನ ವಿಡಿಯೋ ಮಾಡಿ ಬ್ಲಾಕ್ ಮೇಲ್: ಮೇಕಪ್‌ ಮ್ಯಾನ್‌ ಬಂಧನ

0
image_editor_output_image-1133650807-1666759732037.jpg

ಬೆಂಗಳೂರು ಹಿರಿ ಹಾಗೂ ಕಿರುತೆರೆಯೆ ನಟಿಯೊಬ್ಬರ ಅರೆನಗ್ನ ವಿಡಿಯೋ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಮಾನಹಾನಿ ಮಾಡುತ್ತೇನೆ ಎಂದು ಬೆದರಿಸಿ, 30 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ನಟಿಯ ಮೇಕಪ್‌ ಮ್ಯಾನ್‌ ಮಹಾಂತೇಶ್‌ (37) ಎಂಬಾತ ಇದೀಗ ಈಶಾನ್ಯ ವಿಭಾಗದ ಸೆನ್‌ ಪೊಲೀಸರ ಅತಿಥಿಯಾಗಿದ್ದಾನೆ.

ಸಂತ್ರಸ್ತೆಗೆ ಆರೋಪಿ ದೂರದ ಸಂಬಂಧಿಯಾಗಿದ್ದು, ಆಕೆಗೆ ಮೇಕಪ್‌ ಮ್ಯಾನ್‌ ಕೂಡ ಆಗಿದ್ದ. ಹೀಗಾಗಿ ಆಕೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ.

ನಗ್ನ ಹಾಗೂ ಅರೆನಗ್ನ ಚಿತ್ರಗಳು ನನ್ನ ಬಳಿಯಿವೆ ಎಂದು ನಟಿಗೆ ವಾಟ್ಸ್‌ಆಯಪ್‌ ಮೂಲಕ ಆರೋಪಿ ಸಂದೇಶ ಕಳುಹಿಸಿದ್ದ. ನನಗೆ ಬೇಡಿಕೆಯಷ್ಟು ಹಣ ನೀಡಬೇಕು. ಇಲ್ಲದಿದ್ದರೆ ಈ ಚಿತ್ರಗಳು ಹಾಗೂ ವಿಡಿಯೊಗಳನ್ನು ಹರಿಯಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದ.

ಆರಂಭದಲ್ಲಿ ನಟಿ ಅದನ್ನು ನಂಬದೇ ನಿರ್ಲಕ್ಷ್ಯ ವಹಿಸಿದ್ದರು. ಅದಾದ ಕೆಲವೇ ದಿನಗಳ ಬಳಿಕ ಕೆಲವು ಅಶ್ಲೀಲ ವಿಡಿಯೊಗಳನ್ನು ಆರೋಪಿಯು ಅನಾಮಧೇಯ ನಂಬರ್‌ನಿಂದ ಕಳುಹಿಸಿದ್ದ. ಇದರಿಂದ ಹೆದರಿದ ನಟಿ ದೂರು
ದಾಖಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!