ವಿಟ್ಲ: ಕಲ್ಲಡ್ಕ ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯಲ್ಲಿ ವಿಟ್ಲ ಸಮೀಪದ ಕಾಶಿಮಠದಲ್ಲಿ ಪಾದಚಾರಿಗೆ ಲಾರಿಯೊಂದು ಢಿಕ್ಕಿ ಹೊಡೆದು, ಆತ ಗಂಭೀರ ಗಾಯಗೊಂಡಿದ್ದಾರೆ. ಎಂ ಸ್ಯಾಂಡ್ ಸಾಗಾಟ ಮಾಡುತ್ತಿದ್ದ ಲಾರಿ ನಿಲ್ಲಿಸದೇ ಪರಾರಿಯಾದ ಘಟನೆ ಸಂಭವಿಸಿದೆ.
ಕೇಪು ಗ್ರಾಮದ ಮೈರ ನಿವಾಸಿ ಪ್ರಭಾಕರ ಗಾಯಗೊಂಡವರು. ಅವರನ್ನು ತತ್ ಕ್ಷಣ ಮಂಗಳೂರು ಆಸ್ಪತ್ರೆಗೆ ಒಯ್ಯಲಾಗಿದೆ.