ಪುತ್ತೂರು: ಮಗುವಿಗೆ ಅವಧಿ ಮೀರಿದ ಚುಚ್ಚು ಮದ್ದು ನೀಡಿದ ವೈದ್ಯ, ಪುತ್ತೂರು ಠಾಣೆಯಲ್ಲಿ ದೂರು ದಾಖಲು
ಪುತ್ತೂರು: ಒಂದೂವರೆ ತಿಂಗಳ ಹಸುಳೆಗೆ ಅವಧಿ ಮೀರಿದ ಚುಚ್ಚು ಮದ್ದು ನೀಡಿದ್ದಾರೆ ಎಂದು ಪುತ್ತೂರಿನ ಆಸ್ಪತ್ರೆಯೊಂದರ ವೈದ್ಯರ ವಿರುದ್ಧ ಮಗುವಿನ ತಂದೆ ನಗರ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ.
ಕನ್ಯಾನ ನಿವಾಸಿ ಜೀವನ್ ಪ್ರಕಾಶ್ ಡಿ’ಸೋಜಾ ಅವರು ಅ. 24ರಂದು ತನ್ನ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚುಚ್ಚು ಮದ್ದು ಕೊಡಿಸಿದ್ದರು. ಆದರೆ ಚುಚ್ಚು ಮದ್ದಿನಲ್ಲಿ ಸ್ಟಿಕ್ಕರ್ ಅಂಟಿಸಲಾಗಿದ್ದು, ಅವಧಿ ಮೀರಿದ ದಿನಾಂಕ ಕಂಡುಬಂದಿದೆ.
ಹಾಗಾಗಿ ಅವಧಿ ಮೀರಿದ ಚುಚ್ಚು ಮದ್ದು ನೀಡಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ. ಈ ಬಗ್ಗೆ ಪೊಲೀಸರು ವೈದ್ಯರನ್ನು ಠಾಣೆಗೆ ಕರೆಯಿಸಿ ವಿಚಾರಿಸಿರುವ ಮಾಹಿತಿ ಲಭ್ಯವಾಗಿದೆ.




