February 3, 2026

ಹಳಿ ದಾಟುವಾಗ ರೈಲಿಗೆ ಸಿಲುಕಿ ಮೂವರು ಕಾರ್ಮಿಕರು ಮೃತ್ಯು

0
image_editor_output_image1672543078-1666698242589.jpg

ದೆಹಲಿ: ಹಳಿ ದಾಟಲು ಯತ್ನಿಸುವಾಗ ರೈಲಿಗೆ ಸಿಲುಕಿ ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ವಾಯುವ್ಯ ದೆಹಲಿಯ ಬದ್ಲಿ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಮೊಹಮ್ಮದ್ ಹಫೀಜ್, ಮೊಹಮ್ಮದ್ ಮತ್ತು ರಿಯಾಜುಲ್ ಎಂದು ಗುರುತಿಸಲಾಗಿದೆ.

ಮೂರು ಮಂದಿಯೂ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೆಲಸ ಮಾಡುತ್ತಿದ್ದು, ಈ ಮೂವರು ಹಾಗೂ ಮತ್ತೋರ್ವ ಹತ್ತಿರದ ಉದ್ಯಾನವನಕ್ಕೆ ಹೋಗಿ ತಮ್ಮ ನಿವಾಸಕ್ಕೆ ಹಿಂತಿರುಗುತ್ತಿದ್ದಾಗ ಎರಡು ಮಾರ್ಗಗಳಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎರಡು ರೈಲುಗಳ ನಡುವೆ ನಾಲ್ವರು ಸಿಕ್ಕಿಬಿದ್ದಿದ್ದಾರೆ.

ಇನ್ನು ಮೂವರು ಹಳಿಗಳನ್ನು ದಾಟಲು ಯತ್ನಿಸಲು ಹೋಗಿ ರೈಲಿಗೆ ಸಿಲುಕಿದ್ದು, ಎರಡು ರೈಲುಗಳ ನಡುವೆ ಕುಳಿತ ಮತ್ತೋರ್ವ ಜೀವ ಉಳಿಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!