ಪಶ್ಚಿಮ ಬಂಗಾಳ: ಸಹಾಯವಾಣಿಗೆ ಕರೆ ಮಾಡಿ ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ
ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಾಲಕಿಯೊಬ್ಬಳು ನರ್ಸ್ ಆಗುವ ತನ್ನ ಕನಸನ್ನು ನನಸು ಮಾಡುವುದಕ್ಕಾಗಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತನ್ನದೇ ಮದುವೆಯನ್ನು ತಡೆದಿರುವ ಘಟನೆ ನಡೆದಿದೆ.
15 ವರ್ಷದ ಬಾಲಕಿಗೆ ಆಕೆಯ ಪೋಷಕರು ಬಲವಂತವಾಗಿ ಮದುವೆ ಮಾಡಿಸಲು ಮುಂದಾಗಿದ್ದು, ಇದನ್ನು ಅರಿತುಕೊಂಡ ಬಾಲಕಿ ಕೂಡಲೇ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ತನಗೆ ಬಲವಂತದ ಮದುವೆ ಮಾಡಿಸುತ್ತಿರುವ ಬಗ್ಗೆ ದೂರಿತ್ತಿದ್ದಾಳೆ.
ಇನ್ನು ಬಾಲಕಿಯ ಹೆಸರು, ವಿಳಾಸ ಮತ್ತಿತರ ಮಾಹಿತಿಗಳನ್ನು ಸಹಾಯವಾಣಿ ಸಿಬಂದಿ ಪಡೆದುಕೊಂಡಿದ್ದು, ಪೊಲೀಸರೊಂದಿಗೆ ಬಾಲಕಿ ಮನೆಗೆ ಭೇಟಿ ನೀಡಿದರು. ಅಲ್ಲದೆ ಆಕೆ ಅಪ್ರಾಪ್ತಳಾದ ಹಿನ್ನೆಲೆಯಲ್ಲಿ ಆಕೆಯನ್ನು ಮದುವೆ ಮಾಡಿಸದಂತೆ ಪೋಷಕರ ಮನವೊಲಿಸಿದ್ದಾರೆ.





