February 3, 2026

ಮದುವೆಯಾದ ಮಾರನೇ ದಿನ ಅತ್ತೆ ಮನೆಯಲ್ಲಿದ್ದ ನಗದು, ಚಿನ್ನಾಭರಣದೊಂದಿಗೆ ನಾಪತ್ತೆಯಾದ ನವವಿವಾಹಿತೆ

0
image_editor_output_image-305533216-1666603786299.jpg

ಲಕ್ನೋ: ನವವಿವಾಹಿತೆಯೊಬ್ಬಳು ಮದುವೆಯಾದ ಮಾರನೇ ದಿನ ಅತ್ತೆ ಮನೆಯಲ್ಲಿದ್ದ ಎಲ್ಲಾ ನಗದು, ಚಿನ್ನಾಭರಣ ದೋಚಿಕೊಂಡು ಓಡಿಹೋಗಿ ನಂತರ ವರನಿಗೆ ನಾನು ನಿನ್ನನ್ನು ಪ್ರೀತಿಸುತ್ತಿಲ್ಲ, ಇನ್ನು ಮುಂದೆ ನನ್ನನ್ನು ಸಂಪರ್ಕಿಸಬೇಡಿ ಎಂದು ಹೇಳಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶದ ತಕತೌಲಿ ಗ್ರಾಮದ ನಿವಾಸಿ ಅರವಿಂದ್ ಮೋಸ ಹೋದ ನವವಿವಾಹಿತ. ಈತನಿಗೆ ಇಬ್ಬರು ವ್ಯಕ್ತಿಗಳು ಮದುವೆ ಮಾಡಿಸುವುದಾಗಿ ಹೇಳಿ 70,00 ರೂ. ಹಣ ತೆಗೆದುಕೊಂಡಿದ್ದರು. ಅದಾದ ನಂತರ ಬಿಹಾರದ ಗಯಾಗೆ ಹೋಗಿ ಅಲ್ಲಿ ಹಣ ಪಡೆದು ಮದುವೆಯನ್ನು ನಿಶ್ಚಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಗಯಾದ ದೇವಸ್ಥಾನದಲ್ಲಿ ಅರವಿಂದ್‍ಗೆ ವಿವಾಹ ನೆರವೆರಿದೆ. ನಂತರ ಅರವಿಂದ್ ಹಾಗೂ ಆತನ ಪತ್ನಿ ತಮ್ಮ ಸ್ವಂತ ನಿವಾಸಕ್ಕೆ ಮರಳಿದ್ದಾರೆ.

ಅದಾದ ಬಳಿಕ ಮಾರನೇ ದಿನ ಅರವಿಂದ್ ಎಚ್ಚರಗೊಂಡು ನೋಡಿದಾಗ ಪತ್ನಿ ಇರಲಿಲ್ಲ. ಜೊತೆಗೆ ಮನೆಯಿಂದ ಬಾಕ್ಸ್‍ನಲ್ಲಿ ಇಟ್ಟಿದ್ದ 30,000 ರೂ. ಮೌಲ್ಯದ ನಗದು, ಆಭರಣ, ಮದುವೆಗೆ ನೀಡಿದ್ದ ಬಟ್ಟೆಗಳು ಕಾಣೆಯಾಗಿದ್ದವು.

Leave a Reply

Your email address will not be published. Required fields are marked *

error: Content is protected !!