ಕುಂದಾಪುರದಿಂದ ದುಬೈಗೆ ಕರೆಸಿಕೊಂಡು ನಿಗೂಢ ಕೆಲಸಕ್ಕೆ ಬಳಕೆ – ಸಂತ್ರಸ್ತರ ವಿಡಿಯೋ ವೈರಲ್

ಕಳೆದ ಆಗಸ್ಟ್ ನಲ್ಲಿ ಬ್ಯಾಂಕ್ ಉದ್ಯೋಗದ ಆಮಿಷವೊಡ್ಡಿ ದುಬೈಗೆ ಕರೆಸಿಕೊಂಡು ಸಂಬಳವಿಲ್ಲದೆ ಯಾವುದೋ ನಿಗೂಢ ಕೆಲಸಕ್ಕೆ ಬಳಸಿ ಕೊಳ್ಳುತ್ತಿದ್ದಾರೆಂದು ಸಂತ್ರಸ್ಥ ಯುವಕರಿಬ್ಬರು ಅಳಲನ್ನು ತೋಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಬೈಂದೂರು ಮುದ್ದೋಡಿಯ ನಿತಿನ್ ಶೆಟ್ಟಿ ಹಾಗೂ ಉಪ್ಪುಂದದ ವಿಕ್ರಂ ಶೆಟ್ಟಿ ಎಂಬ ಯುವಕರೇ ವಂಚಕರ ಸಂಚಿಗೆ ದುಬೈಯಲ್ಲಿ ಬಲಿ ಪಶುವಾದ ಯುವಕರಾಗಿದ್ದಾರೆ.
ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ವಿಕ್ರಮ್ ಶೆಟ್ಟಿ, ಶಿರೂರು ಬೆಟ್ಟಿನ ಮನೆ ನಿವಾಸಿ ಪ್ರದೀಪ್ ಯಾನೆ ದೀಪ್ ಶೆಟ್ಟಿ ಎಂಬಾತ ದುಬೈನಲ್ಲಿ ಆರು ತಿಂಗಳ ಅವಧಿಗೆ ಆಕರ್ಷಕ ಸಂಬಳದ ಬ್ಯಾಂಕಿಂಗ್ ಕೆಲಸವಿದೆ ಎಂದು ಸಹೋದರ ಸಂದೀಪ್ ಶೆಟ್ಟಿ ಮೂಲಕ ಕರೆಸಿಕೊಂಡಿದ್ದಾನೆ. ಆದರೆ ಇಲ್ಲಿಯವರೆಗೆ ನಮಗೆ ಯಾವುದೇ ಕೆಲಸವಿಲ್ಲ. ನಮ್ಮ ಬ್ಯಾಂಕ್ ಅಕೌಂಟ್ ಮಾಡಿ ಅದರಿಂದ ಅವರು ಹಣ ಸಂಪಾದಿಸುತ್ತಿದ್ದಾರೆ. ದೀಪ್ ಶೆಟ್ಟಿಗೆ ಪಾಕಿಸ್ತಾನ ಕಂಪೆನಿಯೊಂದಿಗೆ ಸಂಪರ್ಕ ಇದೆ ಎಂದು ನಮಗೆ ತಿಳಿದಿದೆ ಎಂದಿದ್ದಾರೆ.
ಇನ್ನು ದುಬೈನಲ್ಲಿರುವ ಕನ್ನಡಿಗರಲ್ಲಿ ನಾವು ನಮ್ಮ ತೊಂದರೆಯನ್ನು ಹೇಳಿಕೊಂಡಿದ್ದೇವೆ. ಅವರು ನಮಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
