ಚಿಕ್ಕಮಗಳೂರು: ಮಗನ ಪ್ರಿಯತಮೆ ಮೇಲೆ ಅತ್ಯಾಚಾರ ಎಸಗಿದ ತಂದೆ
ಚಿಕ್ಕಮಗಳೂರು: ಮಗನ ಅಪ್ರಾಪ್ತ ವಯಸ್ಸಿನ ಪ್ರಿಯತಮೆ ಮೇಲೆ ತಂದೆಯೇ ಅತ್ಯಾಚಾರ ಮಾಡಿದ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಪ್ರಾಪ್ತ ವಯಸ್ಸಿನ ಪ್ರಿಯತಮೆ ತನ್ನ ಪ್ರಿಯಕರನನ್ನು ಹುಡುಕಿಕೊಂಡು ಆತನ ಮನೆಗೆ ತೆರಳಿದ್ದಳು. ಈ ವೇಳೆ ಪ್ರಿಯಕರ ಕೆಲಸಕ್ಕೆಂದು ಮನೆಯಿಂದ ಹೊರಗಡೆ ಹೋಗಿದ್ದ. ಮಗನನ್ನು ಹುಡುಕಿಕೊಂಡು ಬಂದಿದ್ದ ಆತನ ಪ್ರಿಯತಮೆಯನ್ನು ಪ್ರಿಯಕರನ ತಂದೆ ಚಂದ್ರು ಎಂಬಾತ, ಮಗ ರಾತ್ರಿ ಮನೆಗೆ ಬರುತ್ತಾನೆಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಬಲವಂತವಾಗಿ ಮನೆಯಲ್ಲಿರಿಸಿಕೊಂಡು, ಮಲಗಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಆರೋಪಿ ಚಂದ್ರು ವಿರುದ್ಧ ಬಾಲಕಿ ತಾಯಿಯಿಂದ ದೂರು ದಾಖಲಿಸಿದ್ದು, ಚಂದ್ರವನ್ನು ಬಾಳೆಹೊನ್ನೂರು ಪೋಲಿಸರು ಬಂಧಿಸಿದ್ದಾರೆ.





