May 11, 2026

ದೀಪಾವಳಿ ಹಬ್ಬಕ್ಕೆ ಬೋನಸ್ ನೀಡಿಲ್ಲವೆಂದು ಟವರ್ ಹತ್ತಿ ಕುಳಿತು ಪ್ರತಿಭಟಿಸಿದ ಕಾರ್ಮಿಕ

0
IMG-20221022-WA0025.jpg

ದೀಪಾವಳಿ ಬೋನಸ್ ನೀಡಿಲ್ಲವೆಂದು ಕಲಬುರಗಿ ಜಿಲ್ಲೆಯ ಶಹಬಾದ್ ಪಟ್ಟಣದಲ್ಲಿ ಜೆ.ಪಿ.ಸಿಮೆಂಟ್ ಕಾರ್ಖಾನೆ ಕಾರ್ಮಿಕನೋರ್ವ ಟವರ್ ಏರಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ಟವರ್ ಏರಿ ಪ್ರತಿಭಟನೆ ನಡೆಸಿದ ಕಾರ್ಮಿಕನನ್ನು ಮೊಹಮ್ಮದ್ ರಶೀದ್ ಎಂದು ಗುರುತಿಸಲಾಗಿದೆ.

ಕಾರ್ಖಾನೆಯ ನಿಯಮ ಪ್ರಕಾರ ಬೋನಸ್ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕಾರ್ಮಿಕ ಬೋನಸ್ ನೀಡುವವರೆಗೂ ಕೆಳಗಿಳಿಯಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

error: Content is protected !!