February 3, 2026

ಅನುಮಾನಾಸ್ಪದ ಸಂಚಾರ- ಮೀನುಗಾರನ ಮೇಲೆ ಭಾರತೀಯ ನೌಕಾಪಡೆಯಿಂದ ಗುಂಡಿನ ದಾಳಿ

0
IMG-20221021-WA0039.jpg

ರಾಮನಾಥಪುರದ ಕೊಡಿಯಾಕರೈ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ ಮೀನುಗಾರನ ಮೇಲೆ ಅನುಮಾನಗೊಂಡು ಭಾರತೀಯ ನೌಕಾಪಡೆಯು ಆತನ ಮೇಲೆ ಗುಂಡು ಹಾರಿಸಿದ ಘಟನೆ ಶುಕ್ರವಾರ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಮೈಲಾಡುತುರೈ ಮೂಲದ ನಿವಾಸಿ ವೀರವೆಲ್ (30) ಎಂದು ಗುರುತಿಸಲಾಗಿದೆ.

ನೌಕಾಪಡೆ ಸಿಬಂದಿ ಈತ ಹಾಗೂ ದೋಣಿಯ ಮೇಲೆ ಹಲವು ಬಾರಿ ಗುಂಡು ಹೊಡೆದಿದ್ದು, ಇದರಿಂದ ಆತನ ಕಾಲು, ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿದೆ.

ಇನ್ನು ಗಾಯಾಳುವನ್ನು ಕೂಡಲೇ ನೌಕಾ ಹೆಲಿಕಾಪ್ಟರ್‍ ಬಳಸಿ ರಾಮನಾಥಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಧುರೈ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!