March 23, 2026

ಬಂಟ್ವಾಳ: ಲಾರಿ ಮತ್ತು ಪಿಕಪ್ ನಡುವೆ ಅಪಘಾತ ಪ್ರಕರಣ: ಗಾಯಾಳು ಪಾಂಡವರಕಲ್ಲು ನಿವಾಸಿ, ವಿದ್ಯಾರ್ಥಿ ಸಾಹಿಲ್ ಮೃತ್ಯು

0
image_editor_output_image-1034702214-1666028459936

ಪುಂಜಾಲಕಟ್ಟೆ : ಪುಂಜಾಲಕಟ್ಟೆ ಪ್ರಗತಿ ಟ್ರೇಡರ್ಸ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಲಾರಿ ಮತ್ತು ಪಿಕಪ್ ನಡುವೆ ಭೀಕರ ಅಪಘಾತ ಸಂಭವಿಸಿ, ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು‌ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಪಾಂಡವರಕಲ್ಲು ರಿಕ್ಷಾ ಚಾಲಕ ಇಬ್ರಾಹಿಂ ಎಂಬವರ ಮಗ ಸಾಹಿಲ್ (21) ಮೃತಪಟ್ಟ ವಿದ್ಯಾರ್ಥಿ. ಮಂಗಳೂರು ಕಡೆಯಿಂದ ಧರ್ಮಸ್ಥಳದ ಕಡೆಗೆ ಹೋಗುತ್ತಿದ್ದ ಲಾರಿ ಪುಂಜಾಲಕಟ್ಟೆ ಯಿಂದ ವಗ್ಗ ಕಡೆಗೆ ಹೋಗುವ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಪುಂಜಾಲಕಟ್ಟೆ ಠಾಣೆಯ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!