April 8, 2025

ಕಲ್ಲಡ್ಕ: ಅಕ್ರಮ ಗೋ ಸಾಗಾಟ ಪತ್ತೆ ಹಚ್ಚಿದ ಪೊಲೀಸರು: ಒಬ್ಬ ಆರೋಪಿ ವಶಕ್ಕೆ, ಮತ್ತಿಬ್ಬರು ಪರಾರಿ

0

ಬಂಟ್ವಾಳ: ಜಾನುವಾರನ್ನು ಕಳವುಗೈದು ಅಕ್ರಮ ಸಾಗಾಟಕ್ಕೆ ಯತ್ನಿಸುತ್ತಿರುವುದನ್ನು ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ ಐ ಮತ್ತವರ ಸಿಬ್ಬಂದಿಗಳು ಶನಿವಾರ ಬೆಳಗ್ಗೆ ಕಲ್ಲಡ್ಕ ಸಮೀಪದ ಪೂರ್ಲಿಪ್ಪಾಡಿ ಎಂಬಲ್ಲಿ ಪತ್ತೆಹಚ್ಚಿದ್ದು ಈ ಸಂಬಂಧ ಒರ್ವನನ್ನು ಬಂಧಿಸಲಾಗಿ,ಎರಡು ಜಾನುವಾರನ್ನು ರಕ್ಷಿಸಿದ್ದಾರೆ.
ಬಂಧಿತನನ್ನು ಗೋಳ್ತಮಜಲು ಗ್ರಾಮದ ಮದಕ ನಿವಾಸಿ ಮಹಮ್ಮದ್ ಇಸ್ಮಾಯಿಲ್ ( 47) ಎಂದು ಹೆಸರಿಸಲಾಗಿದೆ.ಬಿಳಿಯೂರು ಗ್ರಾಮದ ಸತ್ತಿಕಲ್ಲು ನಿವಾಸಿ ಸತ್ತಾರ್ ಹಾಗೂ ರಿಫಾಝ್ ಎಂಬವರನ್ನು ಆರೋಪಿಗಳಾಗಿ ಹೆಸರಿಸಲಾಗಿದ್ದು,ಇವರಿಬ್ಬರು ತಲೆಮರೆಸಿಕೊಂಡಿದ್ದಾರೆ.
ಶುಕ್ರವಾರ ರಾತ್ರಿ ಗಸ್ತಿನಲ್ಲಿದ್ದ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!