ಮಂಗಳೂರು: ಖಾಸಗಿ ಬಸ್ ಟಿಕೆಟ್ ದರ ಏರಿಸಲು ನಿರ್ಧಾರ
ಮಂಗಳೂರು: ಖಾಸಗಿ ಬಸ್ ಮಾಲೀಕರು ಟಿಕೆಟ್ ದರ ಏರಿಸಲು ನಿರ್ಧರಿಸಿದ್ದಾರೆ. ಡೀಸೆಲ್ ಹಾಗೂ ಟೋಲ್ ದರ ಹೆಚ್ಚಳ ಹಿನ್ನೆಲೆಯಲ್ಲಿ ದರ ಏರಿಸಲು ಮುಂದಾಗಿದ್ದಾರೆ.
ಬೇರೆ ಬೇರೆ ಕಾರಣಗಳಿಂದಾಗಿ ಈವರೆಗೆ ಟಿಕೆಟ್ ದರ ಹೆಚ್ಚಳ ಮಾಡಿರಲಿಲ್ಲ. ಸಾರಿಗೆ ಸಚಿವರಿಗೆ ಈ ಬಗ್ಗೆ ಮನವಿ ಕೊಟ್ಟಿದ್ದೆವು. ಅವರು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಅವರು ತಕ್ಷಣ ತೀರ್ಮಾನ ತೆಗೆದುಕೊಳ್ಳುವಂತೆ ಕಂಡು ಬರುತ್ತಿಲ್ಲ. ನಮಗೆ ಬಸ್ ಓಡಿಸಲು ಸಾಧ್ಯವಾಗುತ್ತಿಲ್ಲ. ಒಂದೆರಡು ಬಸ್ ಇದ್ದವರು ಸಂಚಾರ ಸ್ಥಗಿತಗೊಳಿಸಿದ್ದಾರೆ. ದೊಡ್ಡ ದೊಡ್ಡ ಕಂಪನಿಗಳು ನಷ್ಟದಲ್ಲಿವೆ. ಡೀಸೆಲ್ ದರ ಏರಿಕೆಯಾದಾಗ ಸೆಸ್ ಹಾಕಲು ನಮಗೆ ಅವಕಾಶ ಇದೆ. ಇದೇ ಆಧಾರದಲ್ಲಿ ಪ್ರತಿ ಟಿಕೆಟಿಗೆ 1 ರೂ.ನಿಂದ 3 ರೂ. ವರೆಗೆ ಏರಿಕೆ ಆಗಬಹುದು. ಹತ್ತು ದಿನದ ಒಳಗೆ ಸಭೆ ಕರೆದು ರಾಜ್ಯವಾಪಿ ದರ ಏರಿಕೆ ಜಾರಿ ಮಾಡುತ್ತೇವೆ” ಎಂದು ಕುಯಿಲಾಡಿ ಸುರೇಶ್ ನಾಯ್ಕ ಮಾಹಿತಿ ನೀಡಿದ್ದಾರೆ.





