May 15, 2026

ಮ‌ಂಜೇಶ್ವರ: ಪ್ರವಾಸಕ್ಕೆ ತೆರಳಿದ ವಕಾ೯ಡಿಯ ಯುವಕ ಹಿಮಾಚಲ ಪ್ರದೇಶದಲ್ಲಿ ಮೃತ್ಯು

0
IMG-20221011-WA0005.jpg

ಮಂಜೇಶ್ವರ: ಇಲ್ಲಿನ ಮಜೀರ್ ಪಳ್ಳ ಬಲಿಪಗುಳಿ ನಿವಾಸಿ ಬಲಿಪಗುಳಿ ಅಬ್ದುಲ್ಲ -ಪಾತಿಮ ದಂಪತಿಗಳ ಪುತ್ರನಾದ ಸಿನಾನ್ (28) ಪ್ರವಾಸಕ್ಕೆ ತೆರಳಿದ ವೇಳೆ ಮಂಜಿನ ಒತ್ತಡದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಮೃತಪಟ್ಟಿದ್ದಾನೆ.

ಸಿನಾನ್ ಕತ್ತಾರ್ ನಲ್ಲಿ ಸರಕಾರಿ ಕೆಲಸದಲ್ಲಿದ್ದನು. ಆರು ತಿಂಗಳ ಹಿಂದೆ ಊರಿಗೆ ತಲುಪಿದ್ದು, ಕಳೆದ ತಿಂಗಳ 20 ರಂದು ಮನೆಯಿಂದ ಪ್ರವಾಸಕ್ಕೆ ಎಂಬುದಾಗಿ ತಿಳಿಸಿ ತೆರಳಿದ್ದನು. 15 ದಿನಗಳ ಹಿಂದೆಯೆ ಸಿನಾನ್ ಮೊಬೈಲ್ ಸ್ವಿಚ್ ಆಪ್ ಆಗಿತ್ತು. ಸಿನಾನ್ ಮಜೀರ್ಪಳ್ಳ ಡ್ರೀಂ ಬೋಯ್ಸ್ ಕ್ಲಬ್ಬಿನ ಸದಸ್ಯ ನಾಗಿದ್ದು, ಸಿನಾನ್ ರವರ ಮರಣ ವಾತೆ೯ ಕೇಳಿ ವಕಾ೯ಡಿ ಪ್ರದೇಶದ ಜನತೆ ದು:ಖದಿಂದ ತಲ್ಲಣಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!