ಕಾಂತಾರ ಕ್ಲೈಮ್ಯಾಕ್ಸ್ ನೋಡ ನೋಡುತ್ತಲೇ ಯುವಕನ ದೇಹದಲ್ಲಿ ಆವಾಹನೆ, ಥಿಯೇಟರ್‌ನಲ್ಲೇ ಆರ್ಭಟಿಸಿದ ಯುವಕ..!
ಮಂಗಳೂರು : ಕಾಂತಾರ ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ದೈವ ಆವಾಹನೆಯಾದ ಸುದ್ದಿಯ ಬಳಿಕ ಇದೀಗ ಚಿತ್ರ ವೀಕ್ಷಣೆ ಮಾಡುತ್ತಿದ್ದ ಯುವಕನ ಮೇಲೆ ದೈವದ ಅವಾಹನೆ ಆದ ಮತ್ತೊಂದು ಘಟನೆ ಮಂಗಳೂರಿನಲ್ಲಿ ನಡೆದಿದೆ.
ಸಿನಿಮಾದ ಕ್ಲೈಮಾಕ್ಸ್ ನೋಡುತ್ತಿದ್ದಂತೆ ದೈವ ಮೈಮೇಲೆ ಬಂದಂತೆ ಆ ಯುವಕ ಕೂತ ಸೀಟಿನಿಂದ ಎದ್ದು ವರ್ತಿಸಿದ್ದಾರೆ. ನಗರದ ಚಿತ್ರಮಂದಿದಲ್ಲಿ ರಾತ್ರಿಯ ಶೋ ವೇಳೆ ಈ ಘಟನೆ ನಡೆದಿದ್ದು ವಿಡಿಯೋ ವೈರಲ್ ಆಗಿದೆ.
ಯುವಕನ ಆವೇಶಕ್ಕೆ ಅಕ್ಕಪಕ್ಕದಲ್ಲಿ ಚಿತ್ರ ವೀಕ್ಷಣೆ ಮಾಡುತ್ತಿದ್ದವರು ಕೂಡ ಒಂದು ಕ್ಷಣ ಅವಕ್ಕಾಗಿದ್ದಾರೆ. ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಈ ಕಾಂತಾರ ಚಿತ್ರ ಕನ್ನಡ ಭಾಷೆಯಲ್ಲಿ ತೆರೆ ಕಂಡಿದ್ದು ವಿಶ್ವದಾದ್ಯಂತ ಧೂಳು ಎಬ್ಬಿಸಿದ್ದು ಪ್ರತಿ ದಿನ ಸಾವಿರಾರು ಹೌಸ್ ಫುಲ್ ಶೋಗಳನ್ನು ಕಾಣುತ್ತಿದೆ.
ಇದೇ ಅಕ್ಟೋಬರ್ 14 ರಂದು ಹಿಂದಿ ಮತ್ತು ನವೆಂಬರ್ 15 ರಂದು ತೆಲುಗು ಭಾಷೆಯಲ್ಲಿ ಚಿತ್ರ ತೆರೆ ಕಾಣಲಿದ್ದು ಬಳಿಕ ಮಲಯಾಳಂ ನನ್ನು ಈ ಚಿತ್ರ ಮೂಡಿ ಬರಲಿದೆ.





