February 3, 2026

ಈದ್ ಮೀಲಾದ್ ಆಚರಣೆ ನಡುವೆಯೂ ಮಸೀದಿ ಅಧ್ಯಕ್ಷನ ಕೊಲೆ ಯತ್ನ: ಕಾರಣ ಇನ್ನೂ ನಿಗೂಢ

0
first-information-report

ಕಾರ್ಕಳ:ಮಸೀದಿ ಅಧ್ಯಕ್ಷರೊಬ್ಬರ ಕೊಲೆಗೆ ಯತ್ನಿಸಿದ ಘಟನೆ ಕಾರ್ಕಳ ತಾಲೂಕು ನಿಟ್ಟೆ ಬಳಿ ನಡೆದಿದೆ.

ನಿಟ್ಟೆ ನಿವಾಸಿ ಅಹಮದ್ ಹುಸೈನ್ ಎಂಬುವವರ ಮೇಲೆ ಕೊಲೆ ಯತ್ನ ನಡೆದಿದೆ.

ಅಹಮದ್ ಹುಸೈನ್ ನಿಟ್ಟೆ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು,ಈದ್ ಮಿಲಾದ್ ಕಾರ್ಯಕ್ರಮದ ಪೂರ್ವಾಬಾವಿಯಾಗಿ ನಡೆಸುವ ಮಿಲಾದ್ ಪೆಸ್ಟ್ ಕಾರ್ಯಕ್ರಮ ನಡೆಸುತ್ತಿದ್ದ ಸಂದರ್ಭ ಜಮಾತಿನ ಸದಸ್ಯ ಹಾಗೂ ಮಾಜಿ ಅದ್ಯಕ್ಷ ಮಹಮ್ಮದ್ ಹಾಳೆಕಟ್ಟೆ ಎಂಬಾತನು ಕಾರಿನಲ್ಲಿ ಚೂರಿ ತೆಗೆದುಕೊಂಢು ಬಂದು ಕಾರ್ಯಕ್ರಮದ ಅತಿಥಿಗಳನ್ನು ಕರೆದುಕೊಂಢು ಹೋಗುತ್ತಿದ್ದ ಅಹಮದ್ ಹುಸೈನ್ ರವರನ್ನು ಹಾಗೂ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ನನ್ನು ತಡೆದು ನಿಲ್ಲಿಸಿ ಅಹಮದ್ ಹುಸೈನ್ ಇವರ ಬೆನ್ನಿಗೆ ಚೂರಿಯ ಹಿಡಿಯಿಂದ ಗುದ್ದಿದ್ದು, ಅಬ್ದುಲ್ ಜಬ್ಬಾರ್ ಗೆ ಹಲ್ಲೆ ಮಾಡಿ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾನೆ.

ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!