March 23, 2026

ಗರ್ಭಿಣಿಯರು ಹೆರಿಗೆಗಾಗಿ ಕೈಲಾಸಕ್ಕೆ ಬರಲಿ: ನಿತ್ಯಾನಂದ ಸ್ವಾಮಿ ಆಹ್ವಾನ

0
Screenshot_2022-10-08-12-08-04-13_680d03679600f7af0b4c700c6b270fe7.jpg

ಬೆಂಗಳೂರು: ಮಹಿಳೆಯರೇ ನೀವು ಗರ್ಭಿಣಿಯಾಗಿದ್ದರೆ ಹೆರಿಗೆಗಾಗಿ ಕೈಲಾಸಕ್ಕೆ ಬನ್ನಿ..ಹೀಗೆಂದು ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಗರ್ಭಿಣಿಯರಿಗೆ ಸಲಹೆ ನೀಡಿದ್ದಾನೆ.

ಭಾರತ ಬಿಟ್ಟು ಹೋಗಿ ಕೈಲಾಸವೆಂಬ ಹೊಸ ರಾಷ್ಟ್ರ ಸ್ಥಾಪಿಸಿರುವ ನಿತ್ಯಾನಂದ ಅಲ್ಲಿ ವಿವಿಧ ಅಭಿವೃದ್ದಿ ಚಟುವಟಿಕೆಗಳನ್ನು ಮಾಡುವುದಾಗಿ ಹೇಳಿಕೊಂಡಿದ್ದಾನೆ.

ಶಾಶ್ವತ ಕಾಸ್ಮಿಕ್ ವಿಮಾನ ನಿಲ್ದಾಣ ಮತ್ತು ಇಡೀ ವಿಶ್ವಕ್ಕೆ ಮೀಸಲಾದ ಹೆರಿಗೆ ಆಸ್ಪತ್ರೆಯನ್ನು ಮಾಡುವುದು ಆತನ ಮುಖ್ಯ ಉದ್ದೇಶವಂತೆ. ಈ ಹೆರಿಗೆ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ ಪ್ರೌಢ ಅಲೌಕಿಕ ಪ್ರಕಾಶಮಾನವಾದ ಶಕ್ತಿಯ ಡಿಎನ್‌ಎ ಅಳವಡಿಸುವುದು ಮತ್ತು ಬ್ರಹ್ಮಜ್ಞಾನವುಳ್ಳ ಅನುವಂಶೀಯ ಕೋಡ್ ಕೂಡಾ ನೀಡಲಾಗುತ್ತದೆ ಎಂದು ಹೇಳಿಕೊಂಡಿದ್ದಾನೆ.

ನೀವು ಯಾವುದೇ ದೇಶದಲ್ಲಿರಿ. ಆದರೆ ನಿಮ್ಮ ಮಕ್ಕಳು ವಿಶೇಷ ಚೈತನ್‌ಉಶೀಲರಾಗಬೇಕೆಂದರೆ ಹೆರಿಗೆಗಾಗಿ ಕೈಲಾಸಕ್ಕೇ ಬನ್ನಿ ಎಂದು ವೀಡಿಯೋವೊಂದರಲ್ಲಿ ನಿತ್ಯಾನಂದ ಗರ್ಭಿಣಿಯರಿಗೆ ಆಹ್ವಾನ ನೀಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!