March 23, 2026

ಮಿತ್ತೂರು: ಕೆಎಸ್ ಆರ್ ಟಿ ಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ:
ಬೈಕ್ ಸವಾರ ಗಂಭೀರ

0
IMG-20221007-WA0017.jpg

ಮಿತ್ತೂರು: KSRTC ಬಸ್ಸಿಗೆ ಬೈಕ್ ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ಕಬಕ-ಮಿತ್ತೂರು ನಡುವಿನ ಕುವೆತ್ತಿಲ ತಿರುವಿನಲ್ಲಿ ನಡೆದಿದೆ.

ಬಿ.ಸಿ.ರೋಡಿಂದ ಪುತ್ತೂರಿಗೆ ಹೋಗುತ್ತಿದ್ದ KSRTC ಬಸ್ಸಿಗೆ ಕಬಕ-ಮಿತ್ತೂರು ನಡುವಿನ ಕುವೆತ್ತಿಲ ತಿರುವಿನಲ್ಲಿ ಬೈಕ್ ಒಂದು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಬಸ್ಸಿನ ಮುಂಭಾಗದಲ್ಲಿ ಅಡಿಭಾಗಕ್ಕೆ ನುಸುಳಿ ಸಿಲುಕಿಕೊಂಡಿದ್ದು, ಬೈಕ್ ಸವಾರ ಕೂವೆತ್ತಿಲ ನಿವಾಸಿ ಟ್ಯಾಂಕರ್ ಚಾಲಕ ಜಗ್ಗ ಯಾನೆ ಜಗದೀಶ್ ಗೌಡ(28) ಅದೃಷ್ಟವಶಾತ್ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ.


ಒಂದು ವಾರದ ಹಿಂದಷ್ಟೇ ತನ್ನ ಸ್ನೇಹಿತ ಖರೀದಿಸಿದ್ದ ಹೊಸ ಬೈಕಲ್ಲಿ ಕಬಕ ಹೋಗಿ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಬೈಕ್ ಜಖಂಗೊಂಡಿದೆ.

Leave a Reply

Your email address will not be published. Required fields are marked *

error: Content is protected !!