February 3, 2026

ಬಾಲಿವುಡ್‌ನ ಹಿರಿಯ ನಟ ಅರುಣ್ ಬಾಲಿ ನಿಧನ

0
image_editor_output_image828226821-1665119556975.jpg

ಮುಂಬೈ: ಬಾಲಿವುಡ್‌ನ ಹಿರಿಯ ನಟ ಅರುಣ್ ಬಾಲಿ(79) ನಿಧನರಾಗಿದ್ದಾರೆ. ಈ ಕುರಿತಂತೆ ಸುದ್ದಿ ಸಂಸ್ಥೆ ಎಎನ್‌ಐ ಟ್ವಿಟ್ ಮಾಡಿದೆ.

ಬಾಲಿ ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ನರಗಳು ಮತ್ತು ಸ್ನಾಯುಗಳ ನಡುವಿನ ಸಂವಹನ ವೈಫಲ್ಯದಿಂದ ಉಂಟಾದ ಆಟೋ ಇಮ್ಯೂನ್‌ ಕಾಯಿಲೆಯಾದ ಮೈಸ್ತೇನಿಯಾ ಗ್ರ್ಯಾವಿಸ್‌ನಿಂದ ತಮ್ಮ ತಂದೆ ಬಳಲುತ್ತಿದ್ದರು ಎಂದು ಬಾಲಿ ಅವರ ಮಗ ಅಂಕುಶ್ ಹೇಳಿದರು.

ತಮ್ಮ ತಂದೆ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದರು. ಆದರೆ, ಇಂದು ಮುಂಜಾನೆ 4.30 ರ ಸುಮಾರಿಗೆ ನಿಧನರಾದರು ಎಂದು ಅಂಕುಶ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!