March 23, 2026

PFI ವೆಬ್‌ಸೈಟ್‌ನಲ್ಲಿ ಉಗ್ರಗಾಮಿ ಸಿದ್ಧಾಂತದ ಪರ ಒಲವು ಅಥವಾ ಬೆಂಬಲಿಸುವ ಕುರಿತ ಸಣ್ಣ ಸುಳಿವೂ ಅದರಲ್ಲಿ ಸಿಕ್ಕಿಲ್ಲ: ತನಿಖಾ ಅಧಿಕಾರಿಗಳು

0
image_editor_output_image-1698673628-1665120454980.jpg

ನವದೆಹಲಿ: ‘ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ವೆಬ್‌ಸೈಟ್‌ (http://www.popularfrontindia.org/) ಅನ್ನು ಬಹಳ ಯೋಜಿತವಾಗಿ ರಚಿಸಲಾಗಿದ್ದು, ಉಗ್ರಗಾಮಿ ಸಿದ್ಧಾಂತದ ಪರ ಒಲವು ಹೊಂದಿರುವ ಅಥವಾ ಅದನ್ನು ಬೆಂಬಲಿಸುವ ಕುರಿತ ಸಣ್ಣ ಸುಳಿವೂ ಅದರಲ್ಲಿ ಸಿಕ್ಕಿಲ್ಲ’ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

‘ಪಿಎಫ್‌ಐ ವೆಬ್‌ಸೈಟ್‌ ತುಂಬಾ ರಚನಾತ್ಮಕವಾಗಿದೆ. ಅದನ್ನು ಎಲ್ಲಾ ಆಯಾಮಗಳಿಂದಲೂ ಆಲೋಚಿಸಿ ರಚಿಸಿದಂತಿದೆ’ ಎಂದು ಸಂಘಟನೆಯ ಚಲನವಲನಗಳ ಮೇಲೆ ನಿಗಾ ಇಟ್ಟಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸಂಘಟನೆಯು ಉಗ್ರಗಾಮಿ ಸಿದ್ಧಾಂತವನ್ನು ಅನುಸರಿಸುತ್ತಿತ್ತು ಹಾಗೂ ಅದನ್ನು ಪ್ರಚಾರ ಮಾಡುತ್ತಿತ್ತು ಎಂಬುದನ್ನು ನಿರೂಪಿಸಲು ಬೇಕಿರುವ ಸಣ್ಣ ಸುಳಿವೂ ವೆಬ್‌ಸೈಟ್‌ನಲ್ಲಿ ದೊರೆತಿಲ್ಲ’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಆದೇಶದ ಮೇರೆಗೆ ಈ ವೆಬ್‌ಸೈಟ್‌ ಅನ್ನು ಈಗಾಗಲೇ ರದ್ದುಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!