75 ವರ್ಷದ ಅಜ್ಜನನ್ನು ಪ್ರೀತಿಸಿ ಮದುವೆಯಾದ 18ರ ಯುವತಿ: ಒಂದು ಡಿನ್ನರ್ ಪಾರ್ಟಿಯಲ್ಲಿ ಪ್ರಾರಂಭವಾದ ರಿಯಲ್ ಪ್ರೇಮ ಕಹಾನಿ
ಫಿಲಿಪೈನ್ಸ್, ತಾತನ ವಯಸ್ಸಿನ ವೃದ್ಧನನ್ನು 18ರ ಯುವತಿ ವಿವಾಹವಾದ ರಿಯಲ್ ಪ್ರೇಮ ಕಹಾನಿ ಇದು. ಈ ಸುಂದರ ಪ್ರೇಮ ಕಥೆ ನಡೆದದ್ದು ಫಿಲಿಫೈನ್ಸ್ ನಲ್ಲಿ.
ಫಿಲಿಪೈನ್ಸ್ ನಿವಾಸಿಯಾಗಿರುವ ರಶಾದ್ ಮತ್ತು ಹಲೀಮಾ ಜೋಡಿ ಮೂರು ವರ್ಷಗಳ ಹಿಂದೆ ಕಗಾಯಾನ್ ಪ್ರಾಂತ್ಯದ ಒಂದು ಡಿನ್ನರ್ ಪಾರ್ಟಿಯಲ್ಲಿ ಮೊದಲು ಭೇಟಿಯಾಗಿದ್ದರು. ಆದ್ರೆ ಆಗ ಹಲೀಮಾಗೆ ಬರೇ 15 ವರ್ಷ. ರಶಾದ್ ಗೆ ಬರೋಬ್ಬರಿ 75 ವರ್ಷ.
ಅಲ್ಲಿಂದ ಗಾಢವಾದ ಪ್ರೀತಿಯಲ್ಲಿ ಬಿದ್ದ ಅವರಿಬ್ಬರು ಮೂರು ವರ್ಷದ ಬಳಿಕ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಹಲೀಮಾಗೆ 18 ವರ್ಷ. ರಶಾದ್ ಗೆ 78 ವರ್ಷ..!
ಇಂಟರೆಸ್ಟಿಂಗ್ ವಿಚಾರ ಅಂದ್ರೆ ಅಜ್ಜನಿಗೆ ವಯಸ್ಸು 78 ಆದ್ರೂ ಇದು ಮೊದಲ ಮದುವೆ. ಈತನಿಗೆ ಬೇರೆ ಪ್ರೇಯಸಿಯರೂ ಇರಲಿಲ್ಲ. ಹೀಗಾಗಿ, ಹಲೀಮಾನೇ ಇವನ ಫಸ್ಟ್ ಲವ್ ಮತ್ತು ಫಸ್ಟ್ ಹೆಂಡತಿ ಎನ್ನುವುದು ಮತ್ತೊಂದು ವಿಶೇಷವಾಗಿದೆ.
ಇಬ್ಬರೂ ಇಸ್ಲಾಮಿಕ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಇಬ್ಬರ ಕುಟುಂಬಗಳು ಸಹ ಅವರ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿವೆ.
ಸದ್ಯ ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನೆಟ್ಟಿಗರಿಗೆ ಆಹಾರವಾಗಿದ್ದು ಕೆಲವು ಕಾಲೆಳೆದರೆ ಮತ್ತೆ ಕೆಲವರು ಇಬ್ಬರ ಪ್ರೀತಿ ಹೀಗೆ ಇರಲಿ ಎಂದು ಶುಭ ಹಾರೈಸುತ್ತಿದ್ದಾರೆ.





