March 23, 2026

ಪಂಜಾಬಿ ಗಾಯಕ ಅಲ್ಫಾಜ್ ಪನ್ವಾರ್ ವಾಹನಕ್ಕೆ ಢಿಕ್ಕಿ: ಆಸ್ಪತ್ರೆಗೆ ದಾಖಲು

0
image_editor_output_image-299509090-1664773818630.jpg

ಮೊಹಾಲಿ: ಪಂಜಾಬಿ ಗಾಯಕ ಅಲ್ಫಾಜ್ ಯಾನೆ ಅಮಾನ್ಜೋತ್ ಸಿಂಗ್ ಪನ್ವಾರ್ ಅವರನ್ನು ಶನಿವಾರ ಮೊಹಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಧಾಬಾ ಒಂದರಲ್ಲಿ ವಾಹನಕ್ಕೆ ಢಿಕ್ಕಿ ಹೊಡೆದು ಗಾಯವಾಗಿದೆ ಎನ್ನಲಾಗಿದೆ.

ಗಾಯಕ ಹನಿ ಸಿಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ‘ಅಲ್ಫಾಜ್ ಅಪಾಯದಿಂದ ಪಾರಾಗಿದ್ದಾರೆ’ ಎಂದಿದ್ದಾರೆ.

ವರದಿಗಳ ಪ್ರಕಾರ, ಗಾಯಕನು ತನ್ನ ಮೂವರು ಸ್ನೇಹಿತರ ಜೊತೆ ಡಾಬಾಗೆ ಬಂದಿದ್ದರು. ಅಲ್ಲಿಂದ ಹೊರಡುವ ಸಮಯದಲ್ಲಿ ಡಾಬಾದ ಮಾಜಿ ಉದ್ಯೋಗಿ ವಿಕ್ಕಿ ಅದರ ಮಾಲೀಕರೊಂದಿಗೆ ಜಗಳ ಮಾಡುತ್ತಿದ್ದ. ಅಲ್ಲದೆ ಅಲ್ಫಾಜ್ ನನ್ನು ಕಂಡ ವಿಕ್ಕಿ, ಕೂಡಲೇ ಮಧ್ಯಪ್ರವೇಶಿಸಿ ತನ್ನ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಿದ್ದಾನೆ. ಗಾಯಕ ಮಧ್ಯಪ್ರವೇಶಿಸಲು ನಿರಾಕರಿಸಿದಾಗ ವಿಕ್ಕಿ ಮಾಲೀಕರ ಟೆಂಪೋದೊಂದಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ವಾಹನವನ್ನು ಹಿಂದೆ ತೆಗೆಯುವಾಗ ಅಲ್ಫಾಜ್ ಗೆ ಢಿಕ್ಕಿ ಹೊಡೆದಿದ್ದಾನೆ.

Leave a Reply

Your email address will not be published. Required fields are marked *

error: Content is protected !!