March 23, 2026

ಮಂಗಳೂರು: ನಿರಾಪೇಕ್ಷಣಾ ಪತ್ರಕ್ಕಾಗಿ ಲಂಚ ಪಡೆದ ಮಂಗಳೂರು ತಹಶೀಲ್ದಾರ್ ಬಂಧನ

0
image_editor_output_image-326722420-1664604809278.jpg

ಮಂಗಳೂರು, ನಿರಾಪೇಕ್ಷಣಾ ಪತ್ರ ನೀಡಲು ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ತಹಶೀಲ್ದಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ತಹಶೀಲ್ದಾರ್ ಪುರಂದರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮಂಗಳೂರು ತಹಶೀಲ್ದಾರ್ ಪುರಂದರ ಹಾಗೂ ಕಚೇರಿ ಸಿಬ್ಬಂದಿ ಶಿವಾನಂದ್ ನಾಟ್ಯಾಕರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾವೂರು ನಿವಾಸಿಯೊಬ್ಬರಿಂದ ಲಂಚಪಡೆದ ಸಂದರ್ಭದಲ್ಲಿ ಭ್ರಷ್ಟ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮೂರು ತಿಂಗಳ ಹಿಂದೆ ಎನ್ ಒಸಿಗಾಗಿ ಕಾವೂರು ನಿವಾಸಿ ಅರ್ಜಿ ಸಲ್ಲಿಸಿದ್ದರು. ಆದರೆ ಕೆಲಸವಾಗಬೇಕಾದ್ರೆ ತನಗೆ ಹಾಗೂ ತಹಶೀಲ್ದಾರ್ ಗೆ ಹಣ ನೀಡುವಂತೆ ಸಹಾಯಕ ಶಿವಾನಂದ್ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಕಾವೂರು ನಿವಾಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅರ್ಜಿದಾರರಿಂದ ೪,೭೦೦ ರೂ. ಪಡೆಯುತ್ತಿದ್ದಾಗ ಲೋಕಾಯುಕ್ತ ರೈಡ್ ನಡೆದಿದ್ದು, ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಮಂಗಳೂರು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!