ಕಾರ್ಕಳ: ಅಪಾಯಕಾರಿ ಹೊಂಡ ತಪ್ಪಿಸಲು ಹೋದ ಕಾರಿಗೆ ಇನ್ನೊಂದು ಕಾರು ಢಿಕ್ಕಿ
ಕಾರ್ಕಳ: ಅಪಾಯಕಾರಿ ಹೊಂಡ ತಪ್ಪಿಸಲು ಹೋದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಎರಡೂ ಕಾರುಗಳು ಜಖಂಗೊಂಡ ಘಟನೆ ಕಾರ್ಕಳ ತಾಲೂಕು ಕುಂಟಿಬೈಲು ತಿರುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.ಅಪಘಾತ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿದೆ.
ಬಜಗೋಳಿಯ ವೈದ್ಯರೊಬ್ಬರಿಗೆ ಸೇರಿದ ಕಾರು ಬಜಗೋಳಿಯಿಂದ ಕಾರ್ಕಳಕ್ಕೆ ಹೊರಟಿದ್ದು,ಕುಂಟಿಬೈಲು ತಿರುವಿನಲ್ಲಿರುವ ಅಪಾಯಕಾರಿಯಾದ ದೊಡ್ಡ ಹೊಂಡವನ್ನು ತಪ್ಪಿಸುವಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.