December 19, 2025

ಮೆಲ್ಕಾರ್ ನಲ್ಲಿ RJ BOUTIQE ಮಹಿಳಾ ಉಡುಪುಗಳ ಸುಸಜ್ಜಿತ ಹವಾ ನಿಯಂತ್ರಿತ ಶೋರೂಂ ಶುಭಾರಂಭ

0
image_editor_output_image424393321-1664452884689

ಬಂಟ್ವಾಳ:  ಮೆಲ್ಕಾರ್ ಮಂಗಳೂರು  ವಿಶ್ವವಿದ್ಯಾಲಯ ರಸ್ತೆಯಲ್ಲಿ ನೂತನವಾಗಿ RJ BOUTIQE ವಸ್ತ್ರ ಮಳಿಗೆ ಶುಭಾರಂಭಗೊಂಡಿತು.

ಸಯ್ಯದ್ ಕೆ.ಎಸ್ ಅಟ್ಟಕೋಯ ತಂಙಳ್ ಕುಂಬೋಳ್ ನೂತನ ಸಂಸ್ಥೆಯನ್ನು ಉದ್ಘಾಟಿಸಿ, ದುವಾಃ ಆಶೀರ್ವಚನ ನೀಡಿದರು.

ಪೂಕುಂಞ ತಂಙಳ್ ಉದ್ಯಾವರ,
ಸಯ್ಯದ್ ಕೆ.ಎಸ್ ಅಬ್ದುರ್ರಹ್ಮಾನ್ ಪೊಕೋಯ ತಂಙಳ್, ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ, ಹುಸೈನ್ ಮುಸ್ಲಿಯಾರ್ ತಳಂಗೆರೆ, ಅಬ್ದುಲ್ ಖಾದರ್ ಮುಸ್ಲಿಯಾರ್ ಶುಭ ಹಾರೈಸಿದರು.

ತುಳು ಚಿತ್ರ ನಟ ದೇವದಾಸ್ ಕಾಪಿಕಾಡು ಆಗಮಿಸಿ, ಶುಭ ಹಾರೈಸಿದರು. ಲಕ್ಕಿ ಡ್ರಾ ಗೆ ಚಾಲನೆ ನೀಡಿದರು. ಸಂಸ್ಥೆಯ ಶುಭಾರಂಭದ ಬಗ್ಗೆ ಸ್ಟೇಟಸ್ ಹಾಕಿ ವಿಜೇತರಾತ ಆಶಿಕ್ ಕುಕ್ಕಾಜೆ ಅವರಿಗೆ ಬಹುಮಾನ ವಿತರಿಸಲಾಯಿತು.‌ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ನಾಸೀರ್ ಸಮಾನಿಗೆ, ಮೊಹಮ್ಮದ್ ಇಕ್ಬಾಲ್ ಎಂ.ಎಚ್, ಮೆಲ್ಕಾರ್ ಮಹಿಳಾ ಕಾಲೇಜ್ ನ ಅಧ್ಯಕ್ಷ ಎಸ್ ಎಂ ರಶೀದ್ ಹಾಜಿ, ಸುಳ್ಯ ರಾಜಧಾನಿ ಜುವೆಲ್ಲರ್ಸ್ ಮಾಲಕ ರಝಾಕ್ ಹಾಜಿ, ಬಂಟ್ವಾಳ ಪುರಸಭೆ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಆರ್.ಜೆ BOUTIQU ಸಂಸ್ಥೆಯ ಪಾಲುದಾರರಾದ ತಾನಾಜಿ ಬಾಬರ್ ಮತ್ತು ಪಿ.ಕೆ ಅಬ್ದುಲ್ ಮುತ್ತಲಿಬ್, ಸಂಸ್ಥೆಯ  ಮಹಮ್ಮದ್ ಕಬೀರ್, ಮಹಮ್ಮದ್ ಅರ್ಶದ್ ಉಪಸ್ಥಿತರಿದ್ದರು.

ಬಂಟ್ವಾಳ ಜಂಇಯ್ಯತ್ತುಲ್ ಫಲಹ್ ಅಧ್ಯಕ್ಷ ರಶೀದ್ ವಿಟ್ಲ ಸ್ವಾಗತಿಸಿದರು. ಹಮೀದ್ ಗೋಳ್ತಮಜಲು ನಿರೂಪಿಸಿದರು.

ಮೆಲ್ಕಾರ್ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಚಿನ್ನದ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಆರ್ .ಜೆ ಗೋಲ್ಡ್ ಇದೀಗ ಮಹಿಳೆಯರ ಉಡುಪುಗಳ ಸುಸಜ್ಜಿತ ಸಂಪೂರ್ಣ ಹವಾನಿಯಂತ್ರಿತ ಶೋರೂಂನ್ನು(ladies, kids, one grama gold born baby)
ತೆರೆಯುತ್ತಿದೆ. ಮಹಿಳೆಯರ ಮನಸೂರೆಗೊಳ್ಳುವ, ಸೂರತ್, ಅಹಮದಾಬಾದ್, ಮುಂಬೈ, ಡಿಲ್ಲಿ, ಕಲ್ಕತ್ತಾ, ಜಯಪುರದ ಉನ್ನತ ಡಿಸೈನರಿಂದ ತಯಾರಿಸಿದ ಸರಾರ, ಪೆನ್ಸಿಲ್ ಪ್ಯಾಂಟ್, ಫ್ಲಾಝೋ, ಲೆಹಂಗ, ಗೌನ್ಸ್ ಗಳ ವಿಶೇಷ ಸಂಗ್ರಹ ಇಲ್ಲಿದೆ.

ನೂತನ ಸಂಸ್ಥೆಯ ಶುಭಾರಂಭದ ಪ್ರಯುಕ್ತ  ಪ್ರತೀ 5000 ರೂಪಾಯಿ ಖರೀದಿಯೊಂದಿಗೆ 500 ರೂಪಾಯಿಯ ಗಿಫ್ಟ್ ವೋಚರ್  ಕೊಡುಗೆ ನೀಡಲಾಗಿದೆ.‌
ಮದುವೆ ಖರೀದಿಯ ಬೃಹತ್ ಸಂಗ್ರಹ ಇಲ್ಲಿದೆ.

Leave a Reply

Your email address will not be published. Required fields are marked *

You may have missed

error: Content is protected !!