ಸಂಬಂಧಿಕರ ಜನ್ಮದಿನದ ಆಚರಣೆಗೆ ತೆರಳಿದ್ದಾಗ ಕಂದಕಕ್ಕೆ ಬಿದ್ದ ಬೈಕ್: ಬೈಕ್ ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಸಾವು
ಗದಗ: ಸಂಬಂಧಿಕರೊಬ್ಬರ ಜನ್ಮದಿನ ಆಚರಣೆಗೆ ತೆರಳಿದ್ದ ಯುವಕರಿಬ್ಬರು ಕಂದಕಕ್ಕೆ ಬಿದ್ದು ಸ್ಥಳದಲ್ಲೇ ಸಾವಿಗೀಡಾದ ಘಟನೆ ತಾಲೂಕಿನ ನಾಗಾವಿ ಬಳಿ ನಡೆದಿದೆ.
ತಾಲೂಕಿನ ಲಕ್ಕುಂಡಿ ಗ್ರಾಮದ ಮಂಜುನಾಥ್ ಮಾದರ (19) ಹಾಗೂ ಬಸವರಾಜ್ ಜವಳಬೆಂಚಿ (17) ಮೃತಪಟ್ಟಿದ್ದಾರೆ.
ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ನಾಗಾವಿ ಹಾಗೂ ನಾಗಾವಿ ತಾಂಡಾ ಮಾರ್ಗದಲ್ಲಿನ ರಸ್ತೆ ಕೊಚ್ಚಿ ಹೋಗಿ ರಸ್ತೆ ಮಧ್ಯೆ ದೊಡ್ಡ ಕಂದಕ ನಿರ್ಮಾಣವಾಗಿತ್ತು. ಇದನ್ನು ಅರಿಯದ ಬೈಕ್ ಸವಾರರು ಕಂದಕದಲ್ಲಿ ಬಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲಕ್ಕುಂಡಿ ಗ್ರಾಮದಿಂದ ಯಲಿಸಿರುಂದ ಗ್ರಾಮಕ್ಕೆ ಸಂಬಂಧಿಕರ ಮನೆಗೆ ಜನ್ಮದಿನ ಆಚರಣೆಗೆ ತೆರಳುತ್ತಿದ್ದರೆನ್ನಲಾಗಿದೆ. ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.