September 28, 2026

ಸಂಸದೆ ಶೋಭಾ ಕರಂದ್ಲಾಜೆಯೊಂದಿಗೆ ಸೆಲ್ಫಿ ತೆಗೆದ ಐವರಿಗೆ ತಲಾ 5 ಸಾವಿರ ರೂ. ಬಹುಮಾನ: ಮಿಥುನ್ ರೈ

0
image_editor_output_image886215110-1664344489823.jpg

ಉಡುಪಿ: ಉಡುಪಿ, ಕಾಪು, ಕುಂದಾಪುರ ವ್ಯಾಪ್ತಿಯಲ್ಲಿ ಅಕ್ಟೋಬರ್ 7ರಿಂದ 14 ರೊಳಗೆ ಸಂಸದೆ ಶೋಭಾ ಕರಂದ್ಲಾಜೆ ಕಾಣಿಸಿಕೊಂಡರೆ ಅವರೊಂದಿಗೆ ಸೆಲ್ಫಿ ತೆಗೆದು ಕಳುಹಿಸಿಕೊಡಿ. ವಿಜೇತರಾದ ಐವರಿಗೆ ತಲಾ 5 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಘೋಷಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಮತ್ತು ಉಡುಪಿ ಪ್ರಮುಖ ರಸ್ತೆಗಳನ್ನು ದುರಸ್ತಿಗೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕೇಂದ್ರ, ರಾಜ್ಯ ಸರಕಾರ ಹಾಗೂ ಉಡುಪಿ ನಗರಸಭೆಯ ವಿರುದ್ಧ ಕಲ್ಮಾಡಿ ಜಂಕ್ಷನ್‌ನಿಂದ ಕರಾವಳಿ ಬೈಪಾಸ್‌ವರೆಗೆ ಮಂಗಳವಾರ ನಡೆದ ವಿನೂತನ ಪಾದಯಾತ್ರೆಯ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

 

ದಸರಾ ಬಳಿಕ ಅವರು ಕ್ಷೇತ್ರದಲ್ಲಿ ಕಂಡು ಬಂದಲ್ಲಿ ಸೆಲ್ಫೀ ತೆಗೆದು ಕಳುಹಿಸಿ. ಅಕ್ಟೋಬರ್‍ 14ರ ಬಳಿಕವೂ ಕ್ಷೇತ್ರದಲ್ಲಿ ಸಂಸದರು ಕಾಣಿಸಿಕೊಳ್ಳದಿದ್ದಲ್ಲಿ ಎಲ್ಲಾ ಠಾಣೆಗಳಲ್ಲಿ ನಾಪತ್ತೆ ದೂರು ದಾಖಲಿಸಲಾಗುವುದು ಎಂದರು.

Leave a Reply

Your email address will not be published. Required fields are marked *

You may have missed

error: Content is protected !!