ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕನ ತಲೆ ಮೇಲೆ ಆಟೋ ಹರಿದು ಮೃತ್ಯು
ಮಧುಗಿರಿ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕನ ತಲೆ ಮೇಲೆ ಆಟೋ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಪಟ್ಟಣದ ಶಾಲರಯೊಂದರ ಕುಶಾಲ್ (9) ಮೃತಪಟ್ಟ ಬಾಲಕ.
ಬಾಲಕ ಕುಶಾಲ್ ಬೆಂಕಿಪುರದ ಅಶ್ವತ್ಥ್ ಎಂಬುವವರ ಪುತ್ರನಾಗಿದ್ದು ನಗರದ ಶಾಲೆವೊಂದರಲ್ಲಿ 3 ನೇ ತರಗತಿಯಲ್ಲಿ ಓದುತ್ತಿದ್ದ. ಸಂಜೆ ಮನೆಗೆ ಮರಳುವಾಗ ಆಟೋದಲ್ಲಿ ಬರುವಾಗ ಆಟೋ ಮುಂದೆ ಕುಳಿತಿದ್ದವನು ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದು ಅದೇ ಆಟೋದ ಹಿಂಬದಿಯ ಚಕ್ರ ತಲೆ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.