ಕೇರಳ ತೀವ್ರವಾದಿ, ಭಯೋತ್ಪಾದನೆಯ “ಹಾಟ್ ಸ್ಪಾಟ್”: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ
ತಿರುವನಂತಪುರಂ: ಕೇರಳ ರಾಜ್ಯ ತೀವ್ರವಾದಿ ಮತ್ತು ಭಯೋತ್ಪಾದನೆ ವಿಷಯಗಳಲ್ಲಿ ‘ಹಾಟ್ ಸ್ಪಾಟ್‘ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಕೇರಳ ಪ್ರವಾಸದಲ್ಲಿರುವ ಅವರು ಇಲ್ಲಿನ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೇರಳದಲ್ಲಿ ಹಿಂಸೆ, ಕೋಮು ಉದ್ವಿಗ್ನತೆ ಹೆಚ್ಚುತ್ತಿದ್ದು ದೇವರ ನಾಡು ತೀವ್ರವಾದಿ ಅಂಶಗಳಲ್ಲಿ ‘ಹಾಟ್ ಸ್ಪಾಟ್‘ ಆಗಿದೆ. ಇಲ್ಲಿ ನಾಗರಿಕರ ಬದುಕು ಸುರಕ್ಷಿತವಾಗಿಲ್ಲ ಎಂದು ನಡ್ಡಾ ಹೇಳಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕುಟುಂಬ ಕೂಡ ಸರ್ಕಾರದಲ್ಲಿ ತೊಡಗಿಕೊಂಡಿದೆ. ಅವರ ಮಗಳು ಮತ್ತು ಅಳಿಯ ಸರ್ಕಾರದಲ್ಲಿ ಹಸ್ತಾಕ್ಷೇಪ ಮಾಡುತ್ತಿದ್ದಾರೆ. ಇಲ್ಲಿ ಇರುವುದು ಅಧಿಕೃತವಾಗಿ ಕುಟುಂಬ ಸರ್ಕಾರ ಎಂದು ನಡ್ಡಾ ಆರೋಪ ಮಾಡಿದ್ದಾರೆ.