ಪಿಎಫ್‌ಐ ಮುಖಂಡರ ಎನ್‌ಐಎ ದಾಳಿ, ಬಂಧನ ಖಂಡಿಸಿ ಕೇರಳದಲ್ಲಿ ಹರತಾಳ: ಕಾಸರಗೋಡಿನಲ್ಲಿ ರಸ್ತೆಗೆ ಇಳಿಯದ ಸರಕಾರಿ ಬಸ್ ಗಳು.
ಕಾಸರಗೋಡು: ಪಿಎಫ್‌ಐ ಮುಖಂಡರ ಮನೆ, ಕಚೇರಿ ಮೇಲೆ ಎನ್‌ಐಎ ದಾಳಿ, ಮುಖಂಡರ ಬಂಧನ ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಕೇರಳದಲ್ಲಿ ಕರೆ ನೀಡಿರುವ ಹರತಾಳ ಕಾಸರಗೋಡು ಜಿಲ್ಲೆಯಲ್ಲಿ ಕಂಡು ಬಂದಿದೆ.
ಕುಂಬಳೆಯಲ್ಲಿ ಸರಕು ಲಾರಿ ಮೇಲೆ ಇಂದು ಬೆಳಿಗ್ಗೆ ಕಲ್ಲೆಸೆದ ಘಟನೆ ನಡೆದಿದ್ದು, ಉಳಿದಂತೆ ಮೊದಲ ಗಂಟೆಗಳಲ್ಲಿ ಹರತಾಳ ಶಾಂತಿಯುತವಾಗಿ ನಡೆಯುತ್ತಿದೆ.
ಕಾಸರಗೋಡು ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಸೇರಿದಂತೆ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಇನ್ನು ಬೆಳಿಗ್ಗೆ ಆರರಿಂದ ಸಂಜೆ ಆರರ ತನಕ ಹರತಾಳ ನಡೆಯಲಿದ್ದು, ಪ್ರಮುಖ ಕೇಂದ್ರಗಳಲ್ಲಿ ಪಿಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಹೊಸಂಗಡಿ, ಉಪ್ಪಳ, ಕಾಸರಗೋಡು ಮೊದಲಾದೆಡೆ ಪ್ರತಿ ಭಟನೆ ನಡೆಸಲಾಗುವುದು ಎಂದು ಪಿ ಎಫ್ ಐ ಮುಖಂಡರು ತಿಳಿಸಿದ್ದಾರೆ.




