March 24, 2026

ಸ್ಕೀಡ್ ಆಗಿ ರಸ್ತೆಗೆ ಬಿದ್ದ ಬೈಕ್ ಸವಾರನ ತಲೆಯ ಮೇಲೆ ಹರಿದ ಬಸ್: ಬೈಕ್ ಸವಾರ ಸ್ಥಳದಲ್ಲೇ ಸಾವು

0
image_editor_output_image-355131827-1663836494266.jpg

ಚಿಕ್ಕಬಳ್ಳಾಪುರ: ಬೈಕ್ ಸ್ಕೀಡ್ ಆಗಿ ರಸ್ತೆಗೆ ಬಿದ್ದ ಬೈಕ್ ಸವಾರನ ತಲೆ  ಬಸ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

ದೇವನಹಳ್ಳಿ ತಾಲೂಕಿನ ಅತ್ತಿಬೆಲೆ ಗ್ರಾಮದ ಮುರುಳಿ(35) ಮೃತ ವ್ಯಕ್ತಿ. ಮುರುಳಿ ದೇವನಹಳ್ಳಿ ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ಆಕ್ಟೀವಾ ಹೊಂಡಾ ಮೂಲಕ ಬರುತ್ತಿದ್ದ. ಆದರೆ ಗಿರಿಯಾಸ್ ಶೋ ರೂಂ ಮುಂಭಾಗದಲ್ಲಿ ಏಕಾಏಕಿ ಬ್ರೇಕ್ ಹಾಕಿದ್ದು, ಗಾಡಿ ಸ್ಕಿಡ್ ಆಗಿ ಮುರುಳಿ ರಸ್ತೆಗೆ ಬಿದ್ದು ತರಚಿಕೊಂಡು ಹೋಗಿದೆ.

ಈ ವೇಳೆ ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರ ಮಾರ್ಗದ ಕಡೆಗೆ ಹೋಗುತ್ತಿದ್ದ ಕೆಎಸ್‍ಆರ್‌ಟಿಸಿ ಬಸ್‍ನ ಹಿಂಬದಿ ಚಕ್ರಕ್ಕೆ ಮರುಳಿ ತಲೆ ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆದರೆ ಬಸ್‍ನ ಚಕ್ರ ಮುರುಳಿಗೆ ಟಚ್ ಆಗಿರುವುದು ಚಾಲಕನಿಗೂ ಗೊತ್ತಾಗದೇ ಆತ ತನ್ನ ಪಾಡಾಗಿ ಹೊರಟು ಹೋಗಿದ್ದಾನೆ. ಆದರೆ ಸ್ಥಳೀಯರು ಕೆಎಸ್‍ಆರ್‌ಟಿಸಿ ಬಸ್‍ನ್ನು ಅಡ್ಡ ಹಾಕಿ ತಡೆಯೊಡ್ಡಿದ್ದಾರೆ. 

Leave a Reply

Your email address will not be published. Required fields are marked *

error: Content is protected !!