March 24, 2026

ಮಂಗಳೂರು: ಪಿಎಫ್ ಐ ಕಚೇರಿಗೆ NIA ದಾಳಿ: ಗೋ ಬ್ಯಾಕ್ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು: ಹಲವು ಕಾರ್ಯಕರ್ತರ ಬಂಧನ

0
image_editor_output_image1718434930-1663814642635

ಮಂಗಳೂರು : ಇಂದು ಬೆಳ್ಳಂಬೆಳಗೆ ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ ಕಚೇರಿಗೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಚೇರಿ ಮುಂಭಾಗ ಎನ್ ಐಎ ಅಧಿಕಾರಿಗಳ ವಿರುದ್ಧ ಪಿಎಫ್ ಐ ಕಾರ್ಯಕರ್ತರು ಗೋ ಬ್ಯಾಕ್ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ನೆಲ್ಲಿಕಾಯಿ ರಸ್ತೆಯಲ್ಲಿ ಸಿಆರ್ಪಿಎಫ್ ಪಡೆಯಿಂದ ಬಿಗಿ ಬಂದೋಬಸ್ತ್. ಸಂಪೂರ್ಣ ರಸ್ತೆ ಬಂದ್ ಮಾಡಿದ ಸಿಆರ್ಫಿಎಫ್ ಅಧಿಕಾರಿಗಳು.

NIA ದಾಳಿ ಖಂಡಿಸಿ ಮಂಗಳೂರಿನಲ್ಲಿ ಎಸ್‌ಡಿಪಿಐ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಎಸ್ ಡಿಪಿಐ ಜಿಲ್ಲಾ ಕಚೇರಿ ಮೇಲೆ ಎನ್ ಐಎ ದಾಳಿ ನಡೆಸಿತ್ತು. ವಿಷಯ ತಿಳಿಯುತ್ತಿದ್ದಂತೆ ಎಸ್ ಡಿ ಪಿಐ ಹಾಗೂ ಪಿ ಎಫ್ಐ ಕಾರ್ಯಕರ್ತರು ಜಮಾವನೆಗೊಂಡು ಪ್ರತಿಭಟನೆ ಆರಂಭಿಸಿದ್ದರು. ಆದರೆ ಏಳು ಮೂವತ್ತರ ಸುಮಾರಿಗೆ ಎಲ್ಲಾ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಮನೆಗೆ ತೆರಳಲು ಸೂಚಿಸಿದೆವು. ಆದರೆ ಅವರು ಸ್ಥಳ ಬಿಟ್ಟು ಕದಲಲಿಲ್ಲ. ಬಂದರು ಸೂಕ್ಷ್ಮಪ್ರದೇಶವಾಗಿದ್ದು ಇಲ್ಲಿ ಪ್ರತಿಭಟನೆ ನಡೆಸಿದರೆ ಅನಾಹುತ ಸಾಧ್ಯತೆ ಇರುವುದರಿಂದ ಕೊನೆಗೆ ಅವರನ್ನು ವಶಕ್ಕೆ ಪಡೆದಿದ್ದೇವೆ ಎಂದು ಶಶಿಕುಮಾರ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!