March 24, 2026

ಆಕಸ್ಮಿಕವಾಗಿ ಬಾವಿಗೆ ಬಿದ್ದು ನರಳಾಡುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು

0
image_editor_output_image-146930828-1663678205903.jpg

ವಿಟ್ಲ: ಆಕಸ್ಮಿಕವಾಗಿ ಬಾವಿಗೆ ಬಿದ್ದು ನರಳಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ ಘಟನೆ ವಿಟ್ಲದ ನೀರಕಣಿಯಲ್ಲಿ ನಡೆದಿದೆ.

ಕೂಡೂರು ನಿವಾಸಿ ಬಾಬು ಪೂಜಾರಿ ಅವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ರಸ್ತೆ ಬದಿಯ ಬಾವಿಗೆ ಬಿದ್ದಿದ್ದಾರೆ. ಬಾವಿಯೊಳಗಡೆ ನರಳಾಡುತ್ತಿದ್ದ ಬಾಬು ಪೂಜಾರಿ ಅವರು ಬೊಬ್ಬೆ ಹೊಡೆಯುವುದನ್ನು‌ ಕೇಳಿದ ಸ್ಥಳೀಯರು ಆಗಮಿಸಿದ್ದಾರೆ. ಹಮೀದ್ ಅವರು ಬಾವಿಗೆ ಇಳಿದು ಹಗ್ಗಕಟ್ಟಿ ಹಮೀದ್ ಮೇಲಕ್ಕೆ ಎಳೆದರು. ಸಿದ್ದೀಕ್‌ ಗಮಿ, ಇಚ್ಚಾಲಿ ಗಮಿ, ಶಾಪಿ ಗಮಿ, ಇಸುಬು ಮೇಗಿನಪೇಟೆ, ಜಮಾಲ್ ತಕ್ಷಣ ವಾಹನ ತಂದು ಆಸ್ಪತ್ರೆಗೆ ಸಾಗಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!