March 24, 2026

ಬಿಹಾರದ ಹಲವೆಡೆ ಸಿಡಿಲು ಬಡಿದು 10 ಮಂದಿ ಸಾವು: ಮೃತರ ಕುಟುಂಬಸ್ಥರಿಗೆ ತಲಾ 4 ಲಕ್ಷ ರೂ. ಘೋಷಣೆ

0
image_editor_output_image1616590954-1663655112767.jpg

ಪಾಟ್ನಾ: ಬಿಹಾರದ ಹಲವೆಡೆ ಸಿಡಿಲು ಬಡಿದು 10 ಮಂದಿ ಸಾವನ್ನಪ್ಪಿದ್ದು, ಮೃತರ ಕುಟುಂಬಸ್ಥರಿಗೆ ತಲಾ 4 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ.

ಈ ಕುರಿತಂತೆ ಸೋಮವಾರ ನಿತೀಶ್ ಕುಮಾರ್ ಅವರು, ಗುಡುಗು ಮತ್ತು ಸಿಡಿಲಿನಿಂದಾಗಿ ಪುರ್ನಿಯಾ ಹಾಗೂ ಅರಾರಿಯಾದಲ್ಲಿ ನಾಲ್ಕು ಮಂದಿ ಮತ್ತು ಸುಪೌಲ್‍ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಸ್ಥರಿಗೆ ನನ್ನ ಸಂತಾಪಗಳು ಮತ್ತು ಮೃತರ ಕುಟುಂಬಸ್ಥರಿಗೆ 4 ಲಕ್ಷ ಪರಿಹಾರ ನೀಡಲಾಗುವುದು ಎಂದಿದ್ದಾರೆ

Leave a Reply

Your email address will not be published. Required fields are marked *

error: Content is protected !!