March 26, 2026

ಕಾಸರಗೋಡು: ಕೆರೆಯಲ್ಲಿ ಮುಳುಗಿ ಕುಂಬಳೆಯ ಯುವಕ ಮೃತ್ಯು

0
image_editor_output_image-1815485471-1663566401711.jpg

ಕಾಸರಗೋಡು: ಕೆರೆಯಲ್ಲಿ ಮುಳುಗಿ ಯುವಕನೋರ್ವ ಮೃತ ಪಟ್ಟ ಘಟನೆ ಭಾನುವಾರ ಸಂಜೆ ಕುಂಬಳೆ ಠಾಣಾ ವ್ಯಾಪ್ತಿಯ ಬಂದ್ಯೋಡು ಸಮೀಪದ ಇಚ್ಲಂಗೋಡು ಎಂಬಲ್ಲಿ ನಡೆದಿದೆ.

ಕುಂಬಳೆ ಮಾವಿನ ಕಟ್ಟೆಯ ಜೈನುದ್ದಿನ್ ರವರ ಪುತ್ರ ಸಿನಾನ್ (20) ಮೃತ ಪಟ್ಟವರು.

ಇಚ್ಲಂಗೋಡು ಚಿನ್ನ ಮೊಗರ್ ಎಂಬಲ್ಲಿ ಸ್ನೇಹಿತರ ಜೊತೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಜೊತೆಯಲ್ಲಿದ್ದವರು ಹಾಗೂ ಸ್ಥಳೀಯರು ಸೇರಿ ಸಿನಾನ್ ನನ್ನು ರಕ್ಷಿಸಿ ಆಸ್ಪತ್ರೆಗೆ ರವಾಸಿದರೂ ಅದಾಗಲೇ ಮೃತಪಟ್ಟಿದ್ದ ಎಂದು ವೈದ್ಯರು ಘೋಷಿಸಿದ್ದಾರೆ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸಿದರು. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!