February 3, 2026

ವಿಟ್ಲ: ಜೇಸಿಐ ವತಿಯಿಂದ ಗ್ರೇಟ್ ಡೇ ಸಪ್ತಾಹದ ಸಮಾರೋಪ

0
IMG-20220916-WA0005.jpg

ವಿಟ್ಲ: ವಿಟ್ಲ ಜೇಸಿಐ ವತಿಯಿಂದ ಜೆಸಿಐ ವಿಟ್ಲದ ಗ್ರೇಟ್ ಡೇ ಸಪ್ತಾಹದ ಸಮಾರೋಪ ವಿಠಲ ಪದವಿಪೂರ್ವ ಕಾಲೇಜ್ ನಲ್ಲಿ ನಡೆಯಿತು.

ಆಡಳಿತ ವಿಭಾಗ ನಿರ್ದೇಶಕ ಪುರುಷೋತ್ತಮ ಶೆಟ್ಟಿ ಮಾತನಾಡಿ
ವಿಟ್ಲ ಜೆಸಿಐಯ ಕಾರ್ಯಕ್ರಮಗಳಿಗೆ ವಿಶೇಷ ಮಹತ್ವವಿದೆ. ಎಲ್ಲಾ ಕಾರ್ಯಕ್ರಮಗಳನ್ನು ಉತ್ತಮವಾಗಿ ನಡೆಸುತ್ತಿರುವ ವಿಟ್ಲದ ತಂಡ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ವಿಟ್ಲ ಅಧ್ಯಕ್ಷ ಚಂದ್ರಹಾಸ ಕೊಪ್ಪಳ ವಹಿಸಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಜೇಸಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಸದಸ್ಯರ ಸಹಕಾರದಿಂದ ನಿರಂತರ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂದೀಪ್, ಕ್ಲಿಫರ್ಡ್ ವೇಗಸ್, ಹರ್ಷಿತ್, ಸಂಜೀವ ಎಂ. ಅವರನ್ನು ಸನ್ಮಾನಿಸಲಾಯಿತು. ಪ್ರಭಾಕರ ಶೆಟ್ಟಿ ಅವರಿಗೆ ಕಮಲ ಪತ್ರ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸೌಮ್ಯ ಚಂದ್ರಹಾಸ ಕೊಪ್ಪಳ, ಫಾಮಿ ಕೇಪು ಅವರು ಜೆಸಿ ಕುಟುಂಬಕ್ಕೆ ಸೇರ್ಪಡೆಯಾದರು.

ವಲಯ 15ರ ವಲಯಾಧಿಕಾರಿ ದಿನೇಶ್ ಶೆಟ್ಟಿ, ವೈದ್ಯ ಡಾ. ವಿ. ಕೆ. ಹೆಗ್ಡೆ, ವಿಟ್ಲ ಜೆಸಿಐ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಸಪ್ತಾಹ ನಿರ್ದೇಶಕ ಕ್ಲಿಫರ್ಡ್ ವೇಗಸ್, ಕಾರ್ಯದರ್ಶಿ ನವೀನ್ ಚಂದ್ರ ವಿ. ಆರ್., ಜೆಜೆಸಿ ಅಧ್ಯಕ್ಷೆ ಖುಷಿ ರೈ, ಲೇಡಿ ಜೇಸಿ ಸಂಯೋಜಕಿ ಸೌಮ್ಯ ಚಂದ್ರಹಾಸ್ ಮತ್ತಿತರರು ಉಪಸ್ಥಿತರಿದ್ದರು.

ವರ್ಷಿನಿ, ಅಶ್ವಿನಿ, ರಾಜೀವ್, ಅರುಣ್, ಧೀಕ್ಷತ್, ಅನಿಲ್ ವಡಗೇರಿ ವಿವಿಧ ಜವಾಬ್ದಾರಿ ನಿಭಾಯಿಸಿದರು.

Leave a Reply

Your email address will not be published. Required fields are marked *

error: Content is protected !!