September 27, 2026

ಪುತ್ತೂರು: ಹಿಮ್ಮುಖವಾಗಿ ಚಲಿಸಿದ ಬಸ್, ಬ್ರೇಕ್ ಹಾಕಿ ತಕ್ಷಣ ಬಸ್ ನಿಲ್ಲಿಸಿದ ವಿದ್ಯಾರ್ಥಿ ಸಿಜಾನ್ ಹಸನ್

0
image_editor_output_image-1686981418-1663304576205.jpg

ಮಂಗಳೂರು: ನಿಲ್ಲಿಸಿದ್ದ ಬಸ್‌ ಹಿಮ್ಮುಖವಾಗಿ ಚಲಿಸಿದಾಗ, ಚಾಲಕನ ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ವಿದ್ಯಾರ್ಥಿ ಸಿಜಾನ್ ಹಸನ್ ತಕ್ಷಣ ಬಸ್ ಅನ್ನು ನಿಯಂತ್ರಿಸಿ, ಗಾಬರಿಗೊಂಡಿದ್ದ ಪ್ರಯಾಣಿಕರು ನಿರಾಳವಾಗುವಂತೆ ಮಾಡಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಅನೇಕ ಪ್ರಯಾಣಿಕರ ಜತೆಗೆ, ಸೇಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಿಜಾನ್ ಕುಳಿತಿದ್ದರು. ಇದ್ದಕ್ಕಿದ್ದಂತೆ ಬಸ್ ಹಿಮ್ಮುಖವಾಗಿ ಚಲಿಸಲಾರಂಭಿಸಿತು. ತಕ್ಷಣ ಚಾಲಕನ ಸೀಟಿಗೆ ಜಿಗಿದ ಸಿಜಾನ್ ಬ್ರೇಕ್ ಹಾಕಿ ಬಸ್ ಅನ್ನು ನಿಲ್ಲಿಸಿದರು.

 

ಅಷ್ಟರಲ್ಲಿ ಇನ್ನೊಂದು ಬಸ್‌ನ ಚಾಲಕ ಬಂದು ಹ್ಯಾಂಡ್ ಬ್ರೇಕ್ ಹಾಕಲು ಸಹಕರಿಸಿದರು. ಫ್ಯಾನ್ಸಿ ಸ್ಟೋರ್ ನಡೆಸುತ್ತಿರುವ ಅಬ್ದುಲ್ ಸಲಾಂ ಮತ್ತು ತಾಹಿರಾ ದಂಪತಿ ಪುತ್ರ ಸಿಜಾನ್ ಸಾಹಸವನ್ನು ಸೇಂಟ್ ಫಿಲೋಮಿನಾ ಕಾಲೇಜಿನ ಪ್ರಮುಖರು ಪ್ರಶಂಸಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!