March 24, 2026

ಮಂಜೇಶ್ವರ: ಪತ್ನಿಯ ಕೊಲೆಗೆತ್ನಿಸಿದ ಪ್ರಕರಣ, ಪತಿಯ ಬಂಧನ

0
image_editor_output_image-1508674408-1663148573187.jpg

ಕಾಸರಗೋಡು: ಪತ್ನಿಯ ಕೊಲೆಗೆತ್ನಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪತಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೆದಂಬಾಡಿಯ ಫ್ರಾನ್ಸಿಸ್ ಡಿಸೋಜ (48) ಬಂಧಿತರು. 2015ರಲ್ಲಿ ಘಟನೆ ನಡೆದಿತ್ತು. ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಪಿಕ್ಕಾಸಿನಿಂದ ತಲೆಗೆ ಬಡಿದು ಕೊಲೆಗೆ ಯತ್ನಿಸಿದ್ದನು. ಈತನ ವಿರುದ್ಧ ಕೊಲೆ ಯತ್ನ ಮೊಕದ್ದಮೆ ಹೂಡಲಾಗಿತ್ತು.

ಕೃತ್ಯದ ಬಳಿಕ ಈತ ತಲೆ ಮರೆಸಿಕೊಂಡಿದ್ದನು. ವರ್ಷಗಳ ಬಳಿಕ ಊರಿಗೆ ಬಂದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!