March 24, 2026

ಪುಣೆಯ ಪಿಂಪ್ರಿಯಲ್ಲಿ ರಸ್ತೆ ಅಪಘಾತ: ಮಂಗಳೂರಿನ ವೈದ್ಯೆ ಮೃತ್ಯು

0
image_editor_output_image195177126-1663133208757.jpg

ಮಂಗಳೂರು: ಪುಣೆಯ ಪಿಂಪ್ರಿಯಲ್ಲಿ ದಂತ ವೈದ್ಯೆಯಾಗಿದ್ದ ಮೂಲತಃ ಮಂಗಳೂರಿನ ವೆಲೆನ್ಸಿಯ ನಿವಾಸಿ, ಜಿಶಾ ಜೋನ್‌ (27) ಅವರು ಸೆ. 12ರಂದು ಪುಣೆಯ ಪಿಂಪ್ರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಸ್ಕೂಟರ್‌ನಲ್ಲಿ ಮನೆಗೆ ಹಿಂತಿರುಗುವ ವೇಳೆ ಸ್ಕೂಟರ್‌ಗೆ ಟ್ರಕ್ ಢಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅವರು ಸಾವನ್ನಪ್ಪಿದರು. ಜಿಶಾ ಅವರ ಪತಿ ಪುಣೆಯಲ್ಲಿ ಉದ್ಯಮಿಯಾಗಿದ್ದಾರೆ.

ಮೃತ ಜಿಶಾ ಅವರು ಪತಿ, ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!