October 22, 2026

ಕಂಠಪೂರ್ತಿ ಕುಡಿದು ಕೆರೆಗೆ ಹಾರಿದ ವ್ಯಕ್ತಿ ಸಾವು

0
image_editor_output_image-963279450-1792612975094

ಹಾಸನ: ಗೌರಿ – ಗಣೇಶ ವಿಸರ್ಜನಾ ಮೆರವಣಿಗೆ ನಡೆಯುತ್ತಿದ್ದ ವೇಳೆ ಕೆರೆಯ ಬಳಿಗೆ ಮೂರ್ತಿಗಳನ್ನು ತರುವ ಮುನ್ನವೇ ಕಂಠಪೂರ್ತಿ ಕುಡಿದು ಕೆರೆಗೆ ಹಾರಿದ ವ್ಯಕ್ತಿ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣದ ಅವ್ವೇರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಆನಂದ್ (35) ಮೃತಪಟ್ಟ ವ್ಯಕ್ತಿ. ಅವ್ವೇರಹಳ್ಳಿ ಗ್ರಾಮದಲ್ಲಿ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಇಂದು ಅದ್ದೂರಿಯಾಗಿ ಮೆರವಣಿಗೆ ನಡೆಸಿ ಕೆರೆಯಲ್ಲಿ ಗೌರಿ-ಗಣೇಶನನ್ನು ವಿಸರ್ಜನೆ ಮಾಡಲು ನೂರಾರು ಮಂದಿ ತೆರಳುತ್ತಿದ್ದರು. ಈ ವೇಳೆ ಕಂಠಪೂರ್ತಿ ಕುಡಿದಿದ್ದ ಆನಂದ್, ಗೌರಿ-ಗಣೇಶ ವಿಸರ್ಜನೆಗೂ ಮುನ್ನವೇ ಕೆರೆಗೆ ಜಿಗಿದಿದ್ದು, ಕೆಸರಿನಲ್ಲಿ ಸಿಲುಕಿದ್ದಾನೆ.

ಜೊತೆಗೆ ಬಂದಿದ್ದವರು ಕೆರೆಯಲ್ಲಿ ಶೋಧಕಾರ್ಯ ನಡೆಸಿ ಆನಂದ್‌ನನ್ನು ಹೊರಗೆ ತೆಗೆದು,ರ ನುಗ್ಗೇಹಳ್ಳಿ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಚನ್ನರಾಯಪಟ್ಟಣ ಆಸ್ಪತ್ರೆಗೆ ಕರೆ ತರಲಾಗಿತ್ತು. ಅಷ್ಟರಲ್ಲಿ ಆನಂದ್ ಸಾವನ್ನಪ್ಪಿದ್ದಾನೆ.

ನುಗ್ಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!