October 22, 2026

ಖಾಸಗಿ ಬಸ್‌ಗೆ ಸ್ಕೂಟರ್ ಢಿಕ್ಕಿ: ಇಬ್ಬರು ಯುವತಿಯರು ಸಾವು

0
image_editor_output_image-961432408-1792612809635

ಕೊಟ್ಟಾಯಂ: ಕೊಟ್ಟಾಯಂನ 13ನೇ ಮೈಲಿ ಬಳಿ ಬುಧವಾರ ಬೆಳಿಗ್ಗೆ ಖಾಸಗಿ ಬಸ್‌ಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವತಿಯರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ.

ಮೃತರನ್ನು ಪೋತನ್‌ಪುರಂನ ಪಂಪಾಡಿಯ ಬ್ಲಾಸಮ್ ವ್ಯಾಲಿ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್‌ನ ನಿರ್ದೇಶಕಿ ಫಾದರ್ ಕುರಿಯಾಕೋಸ್ ಕಡವುಂಭಾಗ ಅವರ ಪುತ್ರಿ ಕೃಪಾ ಮೆರಿನ್ ಕುರಿಯನ್ (24) ಮತ್ತು ಮೀನಡಂ ಮೂಲದ ವಟ್ಟಕ್ಕವುಂಗಲ್ ಥಾಮಸ್ ಅವರ ಪುತ್ರಿ ಆಶ್ಲೇ ಆನ್ ಥಾಮಸ್ (25) ಎಂದು ಗುರುತಿಸಲಾಗಿದೆ. ಕೆ.ಕೆ. ರಸ್ತೆಯ 13 ನೇ ಮೈಲಿ ಮಾರ್ಕ್‌ನಲ್ಲಿ ಬೆಳಿಗ್ಗೆ 9 ಗಂಟೆಗೆ ಅಪಘಾತ ಸಂಭವಿಸಿದೆ.

ಮೃತರಾದ ಇಬ್ಬರೂ ಯುವತಿಯರು ಸ್ಕೂಟರ್‌ನಲ್ಲಿ ಪೊನ್ಕುನ್ನಂ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ಮುಂದೆ ಸಾಗುತ್ತಿದ್ದ ಕಾರೊಂದು ಇದ್ದಕ್ಕಿದ್ದಂತೆ ಏಕಾಏಕಿ ಬ್ರೇಕ್ ಹಾಕಿದೆ. ಇದರಿಂದಾಗಿ ಸ್ಕೂಟರ್ ಸವಾರ ಸಮತೋಲನ ಕಳೆದುಕೊಂಡು ನಿಯಂತ್ರಣ ತಪ್ಪಿ ನೇರವಾಗಿ ಎದುರಿಗೆ ಬಂದ ಖಾಸಗಿ ಬಸ್‌ನ ಅಡಿಗೆ ಬಿದ್ದು ಭೀಕರ ಅಪಘಾತಕ್ಕೀಡಾಗಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಎಂಎಸ್‌ಡಬ್ಲ್ಯೂ ಮುಗಿಸಿ ಮನೆಗೆ ಮರಳಿದ್ದ ಕೃಪಾ, ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೊರಡುವ ಹಂತದಲ್ಲಿದ್ದರು. ಆಶ್ಲೇ ಕೂಡ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಸಿದ್ಧತೆ ನಡೆಸಿದ್ದರು. ಈ ಅಪಘಾತಕ್ಕೆ ಸಂಬಂಧಿಸಿದಂತೆ ಪಂಪಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!